ವೀರಾಜಪೇಟೆ, ಸೆ. ೧೬: ಇತಿಹಾಸಿ ಪ್ರಸಿದ್ಧ ವೀರಾಜಪೇಟೆಯ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೋತ್ಸವ ತಾ. ೧೭ ರ (ಇಂದು) ರಾತ್ರಿಯಿಂದ ಆರಂಭಗೊಳ್ಳಲಿದ್ದು, ಅಂತಿಮ ತಯಾರಿ ಭರದಿಂದ ಸಾಗಿದೆ.
ಪಟ್ಟಣದ ೨೨ ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಮೂರ್ತಿ ಗಳನ್ನು ಇಂದು ರಾತ್ರಿ ಪ್ರಭಾವಳಿ-ಪುಷ್ಪ ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ಮೂಲಕ ಕೊಂಡೊಯ್ದು ತಾ. ೧೮ ರಂದು (ನಾಳೆ) ನಸುಕಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ.
ಉತ್ಸವ ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದ್ದು, ಪೊಲೀಸ್ ಇಲಾಖೆ ಬಿಗಿ ಭದ್ರತೆ ವಹಿಸಿದೆ.