ವೀರಾಜಪೇಟೆ, ಸೆ. ೧೬: ವೀರಾಜಪೇಟೆ-ಪೊನ್ನಂಪೇಟೆ ಪ್ರಾಥಮಿಕ ಸಹಕಾರ ಮತ್ತು ಕೃಷಿ ಗ್ರಾಮಿಣ ಅಭಿವೃದ್ದಿ ಬ್ಯಾಂಕ್ (ಪಿಎಲ್ಡಿ ಬ್ಯಾಂಕ್) ಪ್ರಸಕ್ತ ಸಾಲಿನಲ್ಲಿ ೬೫.೯೪ಲಕ್ಷ ರೂಗಳ ಲಾಭಗಳಿಸಿರುವ ಹಿನ್ನೆಲೆಯಲ್ಲಿ ಸದಸ್ಯರುಗಳಿಗೆ ಶೇ. ೫ರಷ್ಟು ಡಿವಿಡೆಂಟ್ ನೀಡಲಾಗುತ್ತಿದ್ದು, ಮುಂದಿನ ಸಾಲಿನಿಂದ ಶೇ ೧೦ ಡಿವಿಡೆಂಟ್ ನೀಡುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಪುರಸಭೆ ಸಭಾಂಗಣದಲ್ಲಿ ಬೊಟ್ಟಂಗಡ ಬಿ. ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಸಲಾದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಷ್ಟದಲ್ಲಿದ್ದ ಬ್ಯಾಂಕನ್ನು ಲಾಭದ ಹೊಸ್ತಿಲಿಗೆ ತರಲಾಗಿದೆ. ಬ್ಯಾಂಕಿನಲ್ಲಿ ೨೬೯೫ ಸದಸ್ಯರಿದ್ದಾರೆ. ೧೩೪.೮೭ ಲಕ್ಷ ರೂಗಳ ಪಾಲು ಬಂಡವಾಳವಿದ್ದು, ಸಂಘದಲ್ಲಿ ಒಟ್ಟು ದುಡಿಯುವ ಬಂಡವಾಳ ೨೬೩೯.೯೯ ಲಕ್ಷ ರೂಗಳಾಗಿದೆ. ಬ್ಯಾಂಕಿನಿAದ ೩೯೪ ಜನ ರೈತರಿಗೆ ಕೃಷಿ ಉದ್ದೇಶಕ್ಕಾಗಿ ನಾಬಾರ್ಡ್ ನಿಂದ ದೀರ್ಘಾವದಿ ಸಾಲ ೧೪೪೧.೬೯ ಲಕ್ಷ ನೀಡಲಾಗಿದ್ದು, ಬ್ಯಾಂಕಿAಗ್ ವಿಭಾಗದಲ್ಲಿ ೧೨೮ ಸದಸ್ಯರಿಗೆ ಕೃಷಿ ಸಾ¯ ೩೭.೫೩ ಲಕ್ಷ ರೂಗಳನ್ನು ವಿತರಿಸಲಾಗಿದೆ. ಸಾ¯ ವಸೂಲಾತಿಯಲ್ಲಿ ರಾಜ್ಯದಲ್ಲಿಯೇ ಕೊಡಗು ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು ೨೦೨೩-೨೪ ನೇ ಸಾಲಿಗೆ ೬೦೧.೮೮ ಲಕ್ಷ ರೂ ತಗಾದೆ ಹೊಂದಿದ್ದು, ಈ ಪೈಕಿ ೫೬೬.೪೭ ಲಕ್ಷ ರೂಗಳ ವಸೂಲಿ ಮಾಡುವ ಮೂಲಕ ಶೇ ೯೪.೧೨ ವಸೂಲಾತಿ ಸಾಧನೆ ಮಾಡಿ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದು ೨೦೨೪-೨೫ ಸಾಲಿಗೆ ಸಾ¯ ಹಂಚಿಕೆ ಗುರಿ ೧೦ ಕೋಟಿ ನೀಡಲು ಪ್ರಯತ್ನಿಸಲಾಗುವುದು. ರಾಜ್ಯ ಬ್ಯಾಂಕ್ನಿAದ ಸತತವಾಗಿ ೨೦೧೯-೨೦ ರಿಂದ ೨೦೨೩-೨೪ರ ಸಾಲಿನ ಪ್ರಶಸ್ತಿ ಪಡೆಯಲಾಗಿದೆ. ರಾಜ್ಯದ ೧೮೩ ಪಿಎಲ್ಡಿ ಬ್ಯಾಂಕ್ಗಳಲ್ಲಿ ಲಾಭ ಗಳಿಸಿದ ಕೆಲವು ಬ್ಯಾಂಕ್ಗಳ ಪೈಕಿ ವೀರಾಜಪೇಟೆ ಭೂಬ್ಯಾಂಕ್ ಕೂಡ ಒಂದಾಗಿದೆ ಎಂದು ಹೇಳಿದರು.
ಮಹಾಸಭೆಯ ಚರ್ಚೆಯಲ್ಲಿ ಕಂಜಿತAಡ ಮಂದಣ್ಣ, ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಚೇಂದ್ರಮಾಡ ಪ್ರಿನ್ಸ್ ಸೋಮಯ್ಯ, ನೆಲ್ಲಮಕ್ಕಡ ಮುತ್ತಣ್ಣ, ಕಾಂಡAಡ ಚರ್ಮಣ, ಪಟ್ರಪಂಡ ರಘು ನಾಣಯ್ಯ, ದಿವಾಕರ್ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು. ಪಿಗ್ಮಿ ಸಾಲ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಪಿಗ್ಮಿ ಸಾ¯ ನೀಡದಂತೆ ಸರ್ವ ಸದಸ್ಯರು ಒತ್ತಾಯಿಸಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಬಾನಂಡ ಕೆ ಅಶೋಕ್ ಕುಮಾರ್, ನಿರ್ದೇಶಕರುಗಳಾದ ಕೆ.ಪಿ ನಾಗರಾಜ್, ಕೆ.ಬಿ ಪ್ರತಾಪ್, ಕೆ.ಎಸ್ ವಿಶ್ವನಾಥ್, ವಿ.ಎ ಅಪ್ಪಚ್ಚು, ಪಿ.ಬಿ ದಯಾನಂದ, ಬಿ.ಜೆ ಬೋಪಣ್ಣ, ಸಿ.ಬಿ ನಂಜಪ್ಪ, ಪಿ.ಎಂ ಕರುಂಬಯ್ಯ, ಎಂ.ಕೆ ಪೂವಮ್ಮ, ಪಿ.ಬಿ ಸವಿತಾ, ವ್ಯವಸ್ಥಾಪಕರಾದ ಜೆ.ಸಿ ಬಸವರಾಜ್ ಉಪಸ್ಥಿತರಿದ್ದರು.