ಸೋಮವಾರಪೇಟೆ, ಸೆ. ೧೬: ಸಮೀಪದ ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಡಿ. ದೇವರಾಜು ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಾಣಿಜ್ಯ ಶಾಸ್ತç ವಿಭಾಗದ ಮುಖ್ಯಸ್ಥೆ ಎಂ.ಎA. ಸುನೀತ ವಹಿಸಿದ್ದರು. ೪ ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ವಯೋ ನಿವೃತ್ತರಾದ ದೇವರಾಜು ಅವರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಬೀಳ್ಕೊಟ್ಟ ಕಾಲೇಜಿನ ಇತರ ಪ್ರಾಧ್ಯಾಪಕರುಗಳು, ದೇವರಾಜು ಅವರ ಸೇವೆಯನ್ನು ಸ್ಮರಿಸಿದರು. ಬಿ.ಟಿ.ಸಿಜಿ. ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಎಂ.ಎಸ್.ಶಿವಮೂರ್ತಿ, ವಿವಿಧ ಕಾಲೇಜುಗಳ ಪ್ರಾಧ್ಯಾಪಕರುಗಳಾದ ಡಾ. ಶ್ಯಾಂ, ಡಾ. ಮಹದೇವ ಪ್ರಸಾದ್, ಡಾ. ನಾರಾಯಣ, ಡಾ. ಬಸವರಾಜು, ಡಾ.ನಟರಾಜು, ನಂಜುAಡಸ್ವಾಮಿ, ಪ್ರಾಧ್ಯಾಪಕ ಡಾ. ಪುಟ್ಟರಾಜು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.