ಸುಂಟಿಕೊಪ್ಪ, ಸೆ. ೧೬: ಸುಂಟಿಕೊಪ್ಪ ಎಸ್‌ಎನ್‌ಡಿಪಿ ಶಾಖಾ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಸಾದ್ ಕುಟ್ಟಪ್ಪ ಅವರನ್ನು ಗ್ರಾ.ಪಂ. ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸುಂಟಿಕೊಪ್ಪ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪ ಅವರನ್ನು ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಸದಸ್ಯರುಗಳು ಮತ್ತು ಸಿಬ್ಬಂದಿ ವರ್ಗದವರು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಸಾದ್ ಕುಟ್ಟಪ್ಪ ಅವರು, ಸರ್ವರನ್ನೂ ಸಮಾನ ದೃಷ್ಟಿಯಿಂದ ನೋಡುವ ಸಮಾಜಕ್ಕೆ ನಾರಾಯಣ ಗುರುಗಳ ಆದರ್ಶವನ್ನು ಸಾರುವ ಒಂದು ದೊಡ್ಡ ಜವಾಬ್ದಾರಿಯನ್ನು ಎಸ್.ಎನ್.ಡಿ.ಪಿ ನನಗೆ ನೀಡಿದೆ. ಮುಂದಿನ ದಿನಗಳಲ್ಲಿ ನಾರಾಯಣ ಗುರುಗಳ ಸಂಕಲ್ಪದ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುವುದು ಎಂದು ನುಡಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳಾದ ಪಿ.ಎಫ್. ಸಬಾಸ್ಟೀನ್, ಬಿ.ಎಂ. ಸುರೇಶ್ (ಪುಟ್ಟ), ಆಲಿಕುಟ್ಟಿ, ಶಬೀರ್, ರಫೀಕ್ ಖಾನ್, ಜಿನಾಷುದ್ದೀನ್, ಸೋಮನಾಥ್ ವಸಂತಿ, ನಾಗರತ್ನ, ಮಂಗಳಿ, ಗೀತಾ, ವನಿತಾ, ಸಿಬ್ಬಂದಿಗಳಾದ ಚಂದ್ರಕಲಾ, ಸಂದ್ಯಾ, ಶ್ರೀನಿವಾಸ್, ಮಂಜುನಾಥ್, ರಂಗ ಸ್ವಾಮಿ, ಮಂದಣ್ಣ ಮತ್ತಿತರರು ಹಾಜರಿದ್ದರು.