ವೀರಾಜಪೇಟೆ, ಸೆ. ೧೫: ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್ ಮಸೂದೆ ತಿದ್ದುಪಡಿ ಖಂಡಿಸಿ ಎಸ್.ಡಿ.ಪಿ.ಐ. ವೀರಾಜಪೇಟೆ ಶಾಖೆ ಇಂದು ಪ್ರತಿಭಟನೆ ನಡೆಸಿತು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವೀರಾಜಪೇಟೆ ಶಾಖೆಯ ವತಿಯಿಂದ ನಗರದ ಗಡಿಯಾರ ಕಂಬದ ಬಳಿ ವಕ್ಫ್ ಮಸೂದೆ ಖಂಡಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಸ್.ಡಿ.ಪಿ.ಐ. ಜಿಲ್ಲಾಧÀ್ಯಕ್ಷರಾದ ಅಬ್ದುಲ್ ಆಡಕರ್ ಅವರು ಮುಸ್ಲಿಂ ಸಮುದಾಯದ ಅಸ್ಮಿತತೆಗೆ ಧಕ್ಕೆಯಾಗುವ ರೀತಿಯಲ್ಲಿ ಕೇಂದ್ರ ಸರ್ಕಾರವು ವಕ್ಫ್ ಮಸೂದೆಯನ್ನು ಜಾರಿಗೊಳಿಸಿದೆ. ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿರುವ ಜಮೀನು, ಸ್ಥಳವನ್ನು ಕಬಳಿಸಲು ಮಾಡಿರುವ ಹುನ್ನಾರವಾಗಿದೆ. ಮುಸ್ಲಿಂ ಸಮುದಾಯವನ್ನು ಮಟ್ಟಹಾಕುವ ನಿಟ್ಟಿನಲ್ಲಿ ಮೋದಿ ಸರ್ಕಾರ ಮುಂದಾಗಿದೆ. ಮಸೂದೆ ಜಾರಿಯಾದಲ್ಲಿ ರಾಜ್ಯ ಮತ್ತು ದೇಶಾದ್ಯಂತ ಹೋರಾಟಗಳು ಸಂಘಟನೆಯ ವತಿಯಿಂದ ನಡೆಯಲಿದೆ ಎಂದರು.

ಮಡಿಕೇರಿ ನಗರಸಭೆ ಸದಸ್ಯ ಹಾಗೂ ಎಸ್.ಡಿ.ಪಿ.ಐ. ಜಿಲ್ಲಾ ಶಾಖೆಯ ಕೋಶಾಧಿಕಾರಿ ಮನ್ಸೂರ್ ಆಲಿ ಮಾತನಾಡಿ, ಮಸೂದೆ ಮಾಡಿರುವುದು ಮುಸ್ಲಿಂ ಸಮುದಾಯವನ್ನು ಧಮನ ಮಾಡಲು ನಮ್ಮ ಪೂರ್ವ ಸಂತತಿಯ ಹಿರಿಯರು ಸಮುದಾಯದ ಏಳಿಗೆಗಾಗಿ, ಅಭಿವೃದ್ಧಿಗಾಗಿ, ಆರ್ಥಿಕವಾಗಿ ಮುಂದುವರೆಯಲು ಆಸ್ತಿಯನ್ನು ಮಾಡಿದ್ದಾರೆ. ಆಸ್ತಿಯನ್ನು ಅನುಭವಿಸಲು ಮತ್ತು ಆಸ್ತಿಯಿಂದ ಬರುವ ಗಳಿಕೆಯಿಂದ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗ ಮಾಡಲು. ಏಕಾಏಕಿಯಾಗಿ ಕೇಂದ್ರ ಸರ್ಕಾರವು ಧರ್ಮದ ಮೇಲೆ ಹೇರಿರುವ ಕಾನೂನಾಗಿದೆ. ಇವುಗಳನ್ನು ವಿರೋಧಿಸುತ್ತೇವೆ ಎಂದು ಹೇಳಿದರು. ಪ್ರತಿಭಟನೆ ಉದ್ದೇಶಿಸಿ ಎಸ್.ಡಿ.ಪಿ.ಐ. ನಗರ ಘಟಕದ ಅಧ್ಯಕ್ಷ ಮೊಹಮ್ಮದ್ ಪುಕ್ರಾನ್ ಮಾತನಾಡಿದರು.

ಮಸೂದೆ ವಿರುದ್ಧ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿಗಳ ವಿರುದ್ದ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರು. ಎಸ್ ಡಿ.ಪಿ.ಐ. ವೀರಾಜಪೇಟೆ ಶಾಖೆಯ ಪದಾಧಿಕಾರಿಗಳು, ಸದಸ್ಯರು, ಜಿಲ್ಲಾ ಸಮಿತಿಯ ಸದಸ್ಯರು ಹಾಜರಿದ್ದರು.