ಐಗೂರು, ಸೆ. ೧೫: ಇಲ್ಲಿನ ಸ.ಹಿ.ಪ್ರಾ. ಶಾಲೆ ಬಳಗುಂದ ಶಾಲಾ ಮಕ್ಕಳಿಗೆ ಸ್ಥಳೀಯ ಬಾಯ್ಸ್ ಪೈಂಟರ್‌ರ್ಸ್ ತಂಡದ ಸದಸ್ಯರಿಂದ ಟಿ-ಶರ್ಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಾಯ್ಸ್ ಪೈಂಟರ್‌ರ್ಸ್ ತಂಡದ ಸದಸ್ಯರು ಎಸ್‌ಡಿಎಂಸಿ ಸದಸ್ಯರು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜು, ಮುಖ್ಯ ಶಿಕ್ಷಕಿ ಭಾಗ್ಯ, ಶಿಕ್ಷಕಿಯರಾದ ಗೀತಾ, ಧರ್ಮಾವತಿ, ನವ್ಯ, ಮತ್ತು ಮಾನಸ ಹಾಜರಿದ್ದರು. ನಾಪೋಕ್ಲು: ಇಲ್ಲಿಯ ಭಗವತಿ ಯುವಕ ಸಂಘದ ವತಿಯಿಂದ ಸ್ಥಳೀಯ (ಕೆ ಪಿ ಎಸ್) ಸರ್ಕಾರಿ ಪ್ರಾಥಮಿಕ ಶಾಲಾಮಕ್ಕಳಿಗೆ ಊಟದ ತಟ್ಟೆ ಹಾಗೂ ಲೋಟವನ್ನು ಕೊಡುಗೆಯಾಗಿ ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಕೆ ಪಿ ಎಸ್ ಶಾಲಾ ಉಪಾಧ್ಯಕ್ಷ ಎನ್ ಎಸ್ ಉದಯಶಂಕರ್, ಭಗವತಿ ಯುವಕ ಸಂಘದ ಅಧ್ಯಕ್ಷ ಕುಲ್ಲೇಟ್ಟಿರ ದೇವಿ ದೇವಯ್ಯ, ಕಾರ್ಯದರ್ಶಿ ಶಿವಚಾಳಿಯಂಡ ಕಿಶೋರ್ ಬೋಪಣ್ಣ, ಮಾಜಿ ಅಧ್ಯಕ್ಷ ಜಾಲಿ ಪೂವಪ್ಪ,ಗ್ರಾಮ ಪಂಚಾಯತ್ ಸದಸ್ಯ ಶಿವಚಾಳಿಯಂಡ ಜಗದೀಶ್, ಯುವಕ ಸಂಘದ ಸದಸ್ಯ ಬೊಪ್ಪಂಡ ವೀರನ್ ಶಾಲಾಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವೀರಾಜಪೇಟೆ: ೭೮ ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಆರ್ ಜಿ ಗ್ರೂಪ್ ಗೆಳೆಯರ ಬಳಗ ಅಮ್ಮತ್ತಿ ಇವರ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾದ ಒಂಟಿಯAಗಡಿ, ಬೈರಂಬಾಡ, ದೇವಣಗೇರಿ ಶಾಲಾ ಮಕ್ಕಳಿಗೆ ಮದ್ಯಾಹ್ನ ಊಟ ವಿತರಿಸಲಾಯಿತು. ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಕಿಟ್, ಕೊಡಲಾಯಿತು, ಈ ಸಂದರ್ಭ ಒಂಟಿಯAಗಡಿ ಶಾಲೆಯ ೭ನೇ ತರಗತಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿನಿಗೆ ಮುಂದಿನ ವಿದ್ಯಾಭ್ಯಾಸದ ವೆಚ್ಚ ಭರಿಸಲಾಯಿತು. ಮ್ಯಾಜಿಕ್ ರಾಜೇಶ್ ಅವರಿಂದ ಉಚಿತವಾಗಿ ಮ್ಯಾಜಿಕ್ ಪ್ರದರ್ಶನವನ್ನು ತೋರಿಸಲಾಯಿತು, ಆರ್ ಜಿ ಗ್ರೂಪ್ ಗೆಳೆಯರ ಬಳಗ ವತಿಯಿಂದ ಶಿವಪ್ಪ, ಸಜೀರ್, ಸಿಜು ರಾಜೇಶ್, ಎರಲ್ಡ್, ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ವೀರಾಜಪೇಟೆ: ಕೆದಮುಳ್ಳೂರು ಗ್ರಾ.ಪಂ ವ್ಯಾಪ್ತಿಯ ಪಾಲಂಗಾಲ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮತ್ತು ಅಂಗನವಾಡಿ ಮಕ್ಕಳಿಗೆ ವೀರಾಜಪೇಟೆಯ ಜೈ ಭಾರತ್ ಆಟೋ ಚಾಲಕರು ಹಾಗೂ ಮಾಲೀಕರ ಸಂಘದಿAದ ಪುಸ್ತಕ ಮತ್ತಿತರ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷÀ ಎಂ.ಎನ್.ಶಿವು ಸಂಘÀ ನಿರಂತರವಾಗಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ರಕ್ತದಾನ ಶಿಬಿರ ನಡೆಸಿದೆ, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನಿ ಮತ್ತಿತರ ಶೈಕ್ಷಣಿಕ ಸಾಮಾಗ್ರಿಗಳನ್ನು ವಿತರಿಸುವ ಕಾರ್ಯ ಮಾಡಿದೆ. ಈ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳಿಗೆ ಆಟೋ ಚಾಲಕರು ಹಾಗೂ ಮಾಲೀಕರು ನೀಡುತ್ತಿರುವ ಸಂಪೂರ್ಣ ಸಹಕಾರವೇ ಕಾರಣವಾಗಿದೆ. ಇನ್ನು ಮುಂದೆಯೂ ಸಂಘ ಇದೇ ರೀತಿಯ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.

ಗ್ರಾ.ಪಂ ಉಪಾಧ್ಯಕ್ಷ ಎಂ.ಎA.ಪರಮೇಶ್ವರ್ ಅವರು ಮಾತನಾಡಿ ಆಟೋ ಚಾಲಕರು ಹಾಗೂ ಮಾಲೀಕರ ಸಮಾಜಮುಖಿ ಕಾರ್ಯಗಳು ಇತರರಿಗೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ಸಂಘದಿAದ ನಡೆಯಲಿ ಎಂದು ಹಾರೈಸಿದರು.

ಸಂಘದ ಗೌರವಾಧ್ಯಕ್ಷ ತೋರೆರ ಪ್ರಭು ಕುಟ್ಟಪ್ಪ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಬಿ.ಕೆ.ಜೀವನ್, ಖಜಾಂಚಿ ಅರ್ಜುನ್ ತಿಮ್ಮಯ್ಯ, ಕಾರ್ಯದರ್ಶಿ ಜಾಕೂಬ್ ನರೋನ್, ಕಾರ್ಯದರ್ಶಿ ಬೆಳ್ಳಿಯಪ್ಪ ಪುಟ್ಟ, ಸದಸ್ಯ ಈರಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷ ಶೀಲಾ ಮೇದಪ್ಪ, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.