ಸೋಮವಾರಪೇಟೆ, ಸೆ. ೧೫: ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ರೂ. ೧೭.೯೬ ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ತಿಳಿಸಿದರು.

ಇಲ್ಲಿನ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕ್‌ನಲ್ಲಿ ೧೮೫೧೬ ಸದಸ್ಯರಿದ್ದು, ಈ ಪೈಕಿ ೨೦೯೪ ಪೂರ್ಣ ಪ್ರಮಾಣದ ಷೇರು, ೧೬೪೨೨ ಅಪೂರ್ಣ ಷೇರು ಹೊಂದಿದೆ. ಷೇರು ಭರ್ತಿ ಮಾಡುವಂತೆ ಈಗಾಗಲೇ ತಿಳುವಳಿಕೆ ನೀಡಲಾಗಿದೆ. ೨೦೨೩-೨೪ನೇ ಸಾಲಿನಲ್ಲಿ ೫೭ ಮಂದಿ ನೂತನ ಸದಸ್ಯರು ಸೇರ್ಪಡೆಗೊಂಡಿದ್ದಾರೆ ಎಂದರು.

ಸದಸ್ಯರಿAದ ೧೧೮೧.೨೨ ಲಕ್ಷ ಸಾಲ ಹೊರಬಾಕಿ ಬಾಕಿಯಿದೆ. ಶೇ. ೯೩ ರಷ್ಟು ಸಾಲ ವಸೂಲಾತಿಯಾಗಿದೆ. ರೂ. ೧೫ ಲಕ್ಷದವರೆಗೆ ಶೇ. ೩ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ರೈತರು ಸೂಕ್ತ ಕಂದಾಯ ದಾಖಲಾತಿಗಳನ್ನು ನೀಡಿ ಸಾಲ ಸೌಲಭ್ಯ ಪಡೆದುಕೊಂಡು, ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ತಮ್ಮ ಹಾಗೂ ಬ್ಯಾಂಕ್‌ನ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಇದರೊಂದಿಗೆ ಸಂಘದ ಸದಸ್ಯರಿಗೆ ಸರ್ಕಾರದ ಯಶಸ್ವಿನಿ ಯೋಜನೆಯನ್ನು ಒದಗಿಸಲಾಗಿದೆ. ಆಡಳಿತ ಮಂಡಳಿಯ ಸಹಕಾರದಿಂದ ಬ್ಯಾಂಕ್‌ನ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಪುರುಷೋತ್ತಮ್ ತಿಳಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಕೊಡಗು-ಹಾಸನ ಜಿಲ್ಲಾ ನಿರ್ದೇಶಕ ಎ. ಮಂಜು, ಬ್ಯಾಂಕ್‌ನ ಉಪಾಧ್ಯಕ್ಷ ಬಿ.ಜಿ. ಪೂವಮ್ಮ, ನಿರ್ದೇಶಕರುಗಳಾದ ಕೆ.ಆರ್. ಕೊಮಾರಪ್ಪ, ಎಂ.ಟಿ. ದಾಮೋಧರ್, ಬಿ.ಬಿ. ಸತೀಶ್, ಡಿ. ಭಗವಾನ್, ಹೆಚ್.ಬಿ. ಶಿವಕುಮಾರ್, ಪಿ.ಸಿ. ಬೇಲಯ್ಯ, ಡಿ.ಡಿ. ಪೊನ್ನಪ್ಪ, ಬಿ. ಜನಾರ್ಧನ್, ಬಿ.ಎನ್. ಮಂಜುನಾಥ್, ಕೆ.ಬಿ. ಕವಿತ, ಕೆ.ಎ. ಲೋಕೇಶ್, ಬಿ.ಕೆ. ಪ್ರಶಾಂತ್, ನಾಮ ನಿರ್ದೇಶಿತ ಸದಸ್ಯ ಜಿ.ಆರ್. ತಮ್ಮಯ್ಯ, ಜಿಲ್ಲಾ ವ್ಯವಸ್ಥಾಪಕ ಎಸ್.ಎಂ. ಮುತ್ತುರಾಜ್, ಬ್ಯಾಂಕ್‌ನ ವ್ಯವಸ್ಥಾಪಕ ಬಿ.ವಿ. ಶಿವಕುಮಾರ್ ಅವರುಗಳು ಉಪಸ್ಥಿತರಿದ್ದರು.