ನಾಪೋಕ್ಲು, ಸೆ. ೧೫: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಬಕ್ಕದ ಕೈಲ್ ಮುಹೂರ್ತ ಕ್ರೀಡಾ ಮಂಡಳಿ ವತಿಯಿಂದ ಕೈಲ್ ಮುಹೂರ್ತ ಕ್ರೀಡಾಕೂಟವನ್ನು ತಾ. ೨೯ ರಂದು ಬಕ್ಕದಲ್ಲಿ ನಡೆಸಲು ಮಂಡಳಿಯ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕ್ರೀಡಾ ಮಂಡಳಿಯ ಅಧ್ಯಕ್ಷ ಬೈತಡ್ಕ ದೇವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ೧೮ನೇ ವರ್ಷದ ಕೈಲ್ ಮುಹೂರ್ತ ಕ್ರೀಡಾಕೂಟಕ್ಕೆ ತಾ. ೨೯ರಂದು ಬೆಳಿಗ್ಗೆ ೧೦ ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಚಾಲನೆ ನೀಡಿ ಕಿರಿಯರಿಂದ ವಯಸ್ಕರÀವರೆಗೆ ವಿವಿಧ ಆಟೋಟ ಸ್ಪರ್ಧೆಗಳು, ಸಾಧಕರಿಗೆ ಸನ್ಮಾನ, ಸಮಾರೋಪ ಸಮಾರಂಭ, ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಹಿರಿಯರಾದ ಹೊಸೊಕ್ಲು ಮೊಣ್ಣಪ್ಪ, ನೈಯ್ಯಣಿ ಹೇಮಕುಮಾರ್, ಹೊಸೊಕ್ಲು ಕಿಶೋರ್, ಯಶೋಧ, ಪುದಿಯನೆರವನ ವೆಂಕಟೇಶ್, ಸದ, ಅರುಣ, ನೈಯ್ಯಣಿ ಶಾರದಾ, ಶಾಂತಿ, ಉಮೇಶ್ ನೆಯ್ಯಣಿ, ಸೂದನ ಸುಜಿ, ಕುಂಜಿಲನ ಲೋಕನಾಥ್, ಬಾಡನ ಸತೀಶ್, ಕಡ್ಲೇರ ತುಳಸಿ ಮೋಹನ್, ಸ್ಥಳೀಯ ಸ್ವಸಹಾಯ ಸಂಘಗಳು ಸ್ತಿçÃಶಕ್ತಿ ಸಂಘ, ಗಜಾನನ ಯುವಕ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು. ಕ್ರೀಡಾ ಮಂಡಳಿಯ ಕಾರ್ಯದರ್ಶಿ ಪುದಿಯನೆರವನ ವೀಣಾ ಸ್ವಾಗತಿಸಿ, ವಂದಿಸಿದರು.