ಮಡಿಕೇರಿ, ಸೆ. ೧೫: ವಿವಿಧ ಹಂತಗಳಲ್ಲಿ ಬೆಳೆದು, ಹಲವು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿರುವ ಹಾಗೂ ಹಲವೆಡೆ ಚದುರಿಹೋಗಿರುವ ಕೊಡವ ಭಾಷಾ ಸಾಹಿತಿಗಳು, ಕಲಾವಿದರು ಗಳನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಒಂದೆಡೆ ಸೇರಿಸಿ ಕೊಡವ ಸಾಹಿತಿಗಳು -ಕಲಾವಿದರುಗಳ ಸಮಾವೇಶವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ
ಈ ವಿಶೇಷ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಯಸುವ ಸಾಹಿತಿಗಳು ಹಾಗೂ ಕಲಾವಿದರುಗಳಿಗೆ ಕೊಡವ ಭಾಷೆ-ಬವಣೆ, ಭವಿಷ್ಯ, ಕೊಡವ ಸಾಹಿತ್ಯ -ಸಂಗೀತ, ಸಂಸ್ಕೃತಿ, ಕೊಡವ ಜಾನಪದ-ಕಲೆ, ಕೊಡವ ಜನಾಂಗಗಳ ಬದುಕು-ಭವಿಷ್ಯ ಎಂಬ ವಿಷಯಗಳ ಬಗ್ಗೆ ಐದೈದು ನಿಮಿಷಗಳ ಅವಧಿಯಲ್ಲಿ ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಲು ಅವಕಾಶ ನೀಡಲಾಗುವುದು.
ಭಾಗವಹಿಸಲು ಇಚ್ಚಿಸುವವರು ೮೭೬೨೯೪೨೯೭೬ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದು ಎಂದು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ತಿಳಿಸಿದ್ದಾರೆ.