ಮಡಿಕೇರಿ, ಸೆ. ೧೪: ಮಡಿಕೇರಿ ಸನಿಹದ ತಾಳತ್ಮನೆಯ ಮಹಿಳೆಯೊಬ್ಬರು ಕೆಲದಿನಗಳ ಹಿಂದೆ ಸಾವಿಗೀಡಾಗಿದ್ದು, ಇದೀಗ ಇವರು ಅವಘಡದಿಂದ ಮೃತಪಟ್ಟಿರುವ ಶಂಕೆ ವ್ಯಕ್ತಗೊಂಡಿದೆ. ಈ ಬಗ್ಗೆ ಗ್ರಾಮಾಂತರ ಪೊಲೀಸರಿಗೂ ಪುಕಾರಾಗಿದ್ದು, ತನಿಖೆ ನಡೆಯುತ್ತಿದೆ. ತಾ.೬ರಂದು ಸಂಜೆ ೬.೩೦ ರಿಂದ ೭ ಗಂಟೆ ಸಮಯದಲ್ಲಿ ಅಲ್ಲಿನ ಕಟ್ರತನ ಶಿವರಾಮ್ ಎಂಬವರ ಪತ್ನಿ ಅನಂತಲಕ್ಷಿö್ಮ (೫೮) ಎಂಬವರು ತಾಳತ್ಮನೆ ಕೆಳಭಾಗದ ರಸ್ತೆಯಲ್ಲಿ ಗಾಯಗೊಂಡಿದ್ದು, ರಸ್ತೆ ಬದಿ ಬಿದ್ದಿದ್ದರೆನ್ನಲಾಗಿದೆ.
ಮಹಿಳೆ ಸಾವು: ಅವಘಡದ ಶಂಕೆ
(ಮೊದಲ ಪುಟದಿಂದ) ಬಳಿಕ ಇವರನ್ನು ವ್ಯಕ್ತಿಯೋರ್ವರು ಪಿಕಪ್ ವಾಹನದಲ್ಲಿ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ದಿದ್ದು, ತಾ.೯ರಂದು ಮೃತಪಟ್ಟಿದ್ದಾರೆ. ಆರಂಭದಲ್ಲಿ ಇವರು ಹಾವು ಕಚ್ಚಿದ್ದರಿಂದ ದುರಂತಕ್ಕೆ ಸಿಲುಕಿದ್ದರು ಎಂಬ ಮಾತು ಕೇಳಿಬಂದಿತ್ತು. ಆದರೆ ಆಸ್ಪತ್ರೆಯಲ್ಲಿ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿಲ್ಲ. ಬದಲಿಗೆ ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದರು ಎಂಬದಾಗಿ ತಿಳಿದುಬಂದಿದೆ ಎಂದು ಹೇಳಲಾಗಿದೆ. ಇವರಿಗೆ ಯಾವುದೋ ವಾಹನ ಡಿಕ್ಕಿಯಾಗಿ ನಿಲ್ಲಿಸದೆ ಪರಾರಿಯಾಗಿರುವ ಸಂಶಯ ಇದೀಗ ವ್ಯಕ್ತಗೊಂಡಿದೆ. ಈ ಹಿನ್ನೆಲೆ ಮೃತರ ಸಂಬAಧಿ ತಿಲಕ್ ಎಂಬವರು ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸ್ ವಿಚಾರಣೆ ನಡೆಯುತ್ತಿದ್ದು, ಒಂದು ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಇದರ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೇ ತಿಳಿಯಬೇಕಿದೆ.