ಮಡಿಕೇರಿ, ಸೆ. ೧೪: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಹಾಗೂ ಗೋಣಿಕೊಪ್ಪ ದಸರಾ ಉತ್ಸವಗಳನ್ನು ಈ ಬಾರಿ ವ್ಯವಸ್ಥಿತವಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಉತ್ಸವಗಳ ಸಂಬAಧ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ದಸರಾ ಉತ್ಸವಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ಶಾಸಕರುಗಳನ್ನೊಳಗೊಂಡು ಸಂಬAಧಿಸಿದವರ ಗಮನ ಸೆಳೆಯುವ ಕೆಲಸ ಮಾಡಲಾಗಿದೆ. ಸದÀ್ಯದಲ್ಲಿಯೇ ಅನುದಾನ ಬಿಡುಗಡೆಗೊಳ್ಳಲಿದ್ದು, ಕಳೆದ ಬಾರಿಗಿಂತ ಹೆಚ್ಚಿನ ಅನುದಾನ ಈ ಬಾರಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ ಎಂದು ಭೋಸರಾಜು ಹೇಳಿದರು. ನಗರಸಭೆ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು, ಜಿಲ್ಲಾಡಳಿತ ದಸರಾ ಸಂಬAಧ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದ ಸಚಿವರು, ಸರ್ವರ ಸಹಕಾರದೊಂದಿಗೆ ಉತ್ಸವವನ್ನು ಯಶಸ್ವಿಯಾಗಿ ನಡೆಸಲಾಗುವುದು ಎಂದರು. ಗಾಂಧಿ ಮೈದಾನದಲ್ಲಿ ಶಾಶ್ವತ ವೇದಿಕೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ರಸ್ತೆಗಳ ರಿಪೇರಿ ಕಾರ್ಯ ಸೇರಿದಂತೆ ಎಲ್ಲಾ ಪೂರ್ವ ಸಿದ್ಧತೆಗಳ ಬಗ್ಗೆ ಸಂಬAಧಿಸಿದ ಇಲಾಖಾಧಿಕಾರಿಗಳು ಗಮನಹರಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ದಸರಾ ಉತ್ಸವ ಉತ್ತಮ ರೀತಿಯಲ್ಲಿ ನಡೆಯಬೇಕೆಂದು ಭೋಸರಾಜು ಹೇಳಿದರು.
ಮಡಿಕೇರಿ ಕ್ಷೇತ್ರದ ಶಾಸಕ
ಡಾ. ಮಂತರ್ ಗೌಡ ಮಾತನಾಡಿ, ದಸರಾ ಆಚರಣೆ
(ಮೊದಲ ಪುಟದಿಂದ) ಸಂಬAಧ ಮಂಟಪಗಳಿಗೆ ಹೆಚ್ಚಿನ ಹಣದ ಅವಶ್ಯಕತೆಯಿದ್ದು, ದಸರಾ ಉಪಸಮಿತಿಗಳಿಗೂ ವಿವಿಧ ಕಾರ್ಯಕ್ರಮಗಳಿಗೆ ಹೆಚ್ಚು ಹಣದ ಅವಶ್ಯಕತೆಯಿದೆ ಎಂದರು. ಮಂಟಪಗಳು ಸಾಗುವ ರಸ್ತೆಯ ಗುಂಡಿ ಮುಚ್ಚುವ ಕಾರ್ಯ ನಡೆಯಬೇಕು. ಮಂಟಪಗಳಿಗೆ ತೊಂದರೆ ಆಗದ ರೀತಿಯಲ್ಲಿ ವಿದ್ಯುತ್ ಇಲಾಖೆ ಸಹಕಾರ ನೀಡಬೇಕು. ಡಿಜೆ ಬಳಕೆ ಸಂಬAಧ ಯಾವುದೇ ಸಮಸ್ಯೆಗಳಾಗದಂತೆ ಕ್ರಮ ವಹಿಸಬೇಕು. ಈ ಬಾರಿ ದಸರಾವನ್ನು ವಿಜೃಂಭಣೆಯಿAದ ಆಚರಿಸುವಂತಾಗಬೇಕು. ಈ ಬಾರಿ ದಸರಾದಲ್ಲಿ ಕಾಫಿಗೆ ಸಂಬAಧಿಸಿದAತೆಯೂ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ನುಡಿದರು.
ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಉಸ್ತುವಾರಿ ಸಚಿವರ ನೇತೃತ್ವದಲ್ಲಿ ದಸರಾ ಉತ್ಸವಕ್ಕೆ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಲಾಗಿದೆ. ದಸರಾ ಉತ್ಸವಕ್ಕೆ ಅಗತ್ಯ ಪೂರ್ವಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಕಾನೂನನ್ನು ಎಲ್ಲರೂ ಗೌರವಿಸಬೇಕಾಗಿದ್ದು, ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಧ್ವನಿವರ್ಧಕದ ಬಳಕೆ ಆಗಬೇಕು. ಅಧಿಕಾರಿಗಳು ಹೆಚ್ಚು ಹಸ್ತಕ್ಷೇಪ ಮಾಡದೆ ಉತ್ಸವ ಆಚರಣೆಗೆ ಸಹಕಾರ ನೀಡುವಂತಾಗಬೇಕೆAದು ಹೇಳಿದರು.
ಜಿಲ್ಲಾಧಿಕಾರಿ, ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರಾದ ವೆಂಕಟ್ರಾಜಾ ಅವರು ಮಾತನಾಡಿ, ಮುಂದಿನ ಮಂಗಳವಾರ ಮಡಿಕೇರಿ ದಸರಾ ಉತ್ಸವದ ಉಪಸಮಿತಿಗಳ ಸಭೆ ನಡೆಸಿ ಕಾರ್ಯಕ್ರಮಗಳ ರೂಪುರೇಷೆ ಬಗ್ಗೆ ಮಾಹಿತಿ ಪಡೆದು ಚರ್ಚಿಸಲಾಗುವುದು. ಜಿಲ್ಲೆಯ ಎರಡೂ ಕಡೆಗಳಲ್ಲೂ ದಸರಾ ಉತ್ತಮವಾಗಿ ನಡೆಯಬೇಕು. ಡಿಜೆ ಬಳಕೆ ಸಂಬAಧ ಮಂಟಪ ಸಮಿತಿಗಳು ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕು. ಮಡಿಕೇರಿ ದಸರಾದಲ್ಲಿ ಕಾಫಿಗೆ ಸಂಬAಧಿಸಿದ ಕಾರ್ಯಕ್ರಮವನ್ನು ಸೇರಿಸಲಾಗುವುದು. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಡುವೆ ಕ್ರಿಕೆಟ್ ಪಂದ್ಯಾಟ ಆಯೋಜಿಸಲು ಕೂಡ ಚಿಂತನೆ ನಡೆಸಲಾಗಿದೆ. ಉತ್ಸವದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದು ನುಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ದಸರಾ ಉತ್ಸವಕ್ಕೆ ಅದರದೇ ಆದ ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯಿದ್ದು, ಈ ಉತ್ಸವದಲ್ಲಿ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವಾಗಬೇಕು. ಕೇವಲ ಡಿಜೆಗೆ ಮಾತ್ರ ಪ್ರಾಮುಖ್ಯತೆ ನೀಡುವಂತಾಗಬಾರದು. ಮಂಟಪಗಳನ್ನು ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಹೊರಡಿಸುವಂತಾಗಬೇಕು. ಎಲ್ಲರ ಹಿತದೃಷ್ಟಿಯಿಂದ ಕನಿಷ್ಟ ಮಟ್ಟದ ಧ್ವನಿವರ್ಧಕವನ್ನು ಅಳವಡಿಸಿಕೊಳ್ಳಲು ಸಮಿತಿಗಳು ನಿರ್ಧರಿಸಬೇಕು ಎಂದು ಸಲಹೆಯಿತ್ತರು.
ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಈ ಬಾರಿ ದಸರಾ ಉತ್ಸವಕ್ಕೆ ರೂ.೩ ಕೋಟಿ ಅನುದಾನ ಒದಗಿಸುವಂತೆ ಕೋರಿದರು. ಸಮಿತಿಯ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಸರ್ಕಾರದಿಂದ ದಸರಾ ಉತ್ಸವಕ್ಕೆ ಹೆಚ್ಚಿನ ಅನುದಾನ ನೀಡಿದರೆ ಸಾರ್ವಜನಿಕವಾಗಿ ವಂತಿಗೆ ಸಂಗ್ರಹಿಸುವ ಅಗತ್ಯತೆ ಇರುವುದಿಲ್ಲ. ಕಲಾವಿದರಿಗೂ ಹೆಚ್ಚಿನ ಸಂಭಾವನೆ ನೀಡಲು ಅನುಕೂಲವಾಗುತ್ತದೆ ಎಂದರು. ಮಾಜಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ದಸರಾ ಉತ್ಸವಕ್ಕೆ ರೂ. ೨ ಕೋಟಿ ಅನುದಾನ ನೀಡುವಂತಾಗಬೇಕು. ದಸರಾ ಸಂದರ್ಭ ಹೆಚ್ಚಿನ ಪ್ರವಾಸಿಗರು ಬರುವುದರಿಂದ ರಸ್ತೆಗಳ ರಿಪೇರಿಗೆ ಎರಡರಿಂದ ಮೂರು ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಮತ್ತೋರ್ವ ಮಾಜಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸಬೇಕು. ಸರ್ಕಾರದ ಹಣದಲ್ಲೇ ಉತ್ಸವ ನಡೆಯುವಂತಾಗಬೇಕು. ಇಲ್ಲವಾದರೆ ದಸರಾ ಸಮಿತಿ ವಂತಿಗೆ ಸಂಗ್ರಹಿಸುವುದರಿAದ ಮಂಟಪ ಸಮಿತಿಗಳಿಗೆ ಹಾಗೂ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ ಎಂದರು. ಸಮಿತಿಯ ಖಜಾಂಚಿ ಅರುಣ್ ಶೆಟ್ಟಿ ಮಾತನಾಡಿ, ಮಡಿಕೇರಿಯ ಎಲ್ಲಾ ರಸ್ತೆಗಳ ರಿಪೇರಿ ಕಾರ್ಯ ಶೀಘ್ರ ನಡೆಯಬೇಕೆಂದರು. ಸಮಿತಿಯ ಗೌರವ ಸಲಹೆಗಾರ ಸತೀಶ್ ಪೈ ಮಾತನಾಡಿ, ಗಾಂಧಿ ಮೈದಾನದಲ್ಲಿ ಶಾಶ್ವತ ವೇದಿಕೆ ನಿರ್ಮಾಣಕ್ಕೆ ಕ್ರಮ ಕೈಗೊಂಡರೆ ಪ್ರತಿಬಾರಿ ವೇದಿಕೆಗಾಗಿ ವೆಚ್ಚವಾಗುವ ಸುಮಾರು ೩೫ ಲಕ್ಷ ರೂ. ಉಳಿತಾಯವಾಗಲಿದೆ ಎಂದು ಹೇಳಿದರು. ಮತ್ತೋರ್ವ ಸಲಹೆಗಾರ ಎಂ.ಬಿ. ದೇವಯ್ಯ ಮಾತನಾಡಿ, ರಸ್ತೆಗಳ ದುರವಸ್ಥೆಯನ್ನು ಸರಿಪಡಿಸಬೇಕು. ರಸ್ತೆ ಬದಿ ಕಾಡು ಕಡಿಯುವ ಕಾರ್ಯ ನಡೆಯಬೇಕು ಎಂದು ನುಡಿದರು. ಉಪಾಧ್ಯಕ್ಷ ಬಿ.ಎಂ. ರಾಜೇಶ್ ಮಾತನಾಡಿ, ಉತ್ಸವ ಸಂದರ್ಭ ಮಡಿಕೇರಿ ವ್ಯಾಪ್ತಿಯಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಆಗಬೇಕು. ಧ್ವನಿವರ್ಧಕಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.
ದಶಮಂಟಪ ಸಮಿತಿಯ ಜಿ.ಸಿ. ಜಗದೀಶ್ ಮಾತನಾಡಿ, ಮಂಟಪಗಳು ಸಾಗುವ ಹಾದಿಯಲ್ಲಿ ಗುಂಡಿ ಮುಚ್ಚುವ ಕೆಲಸವಾಗಬೇಕು. ದಸರಾ ಉತ್ಸವದ ಮರುದಿನವೂ ಮಂಟಪಗಳು ಸಾಗಲು ತೊಂದರೆಯಾಗದAತೆ ಸಂಚಾರ ವ್ಯವಸ್ಥೆಯನ್ನು ಸರಿಪಡಿಸಬೇಕು. ಮಂಟಪಗಳಿಗೆ ತಲಾ ೮ ಲಕ್ಷ, ಕರಗಗಳಿಗೆ ತಲಾ ೫ ಲಕ್ಷ ಅನುದಾನ ನೀಡುವಂತಾಗಬೇಕೆAದರು. ಮಂಟಪಗಳ ಕಥಾ ಸಾರಾಂಶ ಪ್ರದರ್ಶನಕ್ಕೆ ಇತಿಮಿತಿಯಲ್ಲಿ ಧ್ವನಿವರ್ಧಕವನ್ನು ಬಳಸಲಾಗುವುದೆಂದರು.
ಗೋಣಿಕೊಪ್ಪ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ಗೋಣಿಕೊಪ್ಪದಲ್ಲೂ ವಿಭಿನ್ನ ರೀತಿಯಲ್ಲಿ ದಸರಾ ಆಚರಿಸಲಾಗುತ್ತಿದ್ದು, ಸರ್ಕಾರದಿಂದ ಹೆಚ್ಚಿನ ಅನುದಾನ ಕಲ್ಪಿಸುವಂತಾಗಬೇಕೆAದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ, ಜಿ.ಪಂ. ಸಿಇಓ ಆನಂದ್ ಪ್ರಕಾಶ್ ಮೀನಾ, ಉಪವಿಭಾಗಾಧಿಕಾರಿ ವಿನಾಯಕ್ ನರ್ವಾಡೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಉಪಸ್ಥಿತರಿದ್ದರು.