ಶ್ರೀಮಂಗಲ, ಸೆ. ೧೫: ಪೊನ್ನಂಪೇಟೆಯ ಇಗ್ಗುತಪ್ಪ ಕೊಡವ ಸೌಹಾರ್ದ ಸಹಕಾರಿ ಸಂಘ ನಿಯಮಿತ ಸಂಸ್ಥೆ ೨೦೨೩ -೨೪ರ ಸಾಲಿನ ಆರ್ಥಿಕ ವರ್ಷದಲ್ಲಿ ರೂ.೮೫.೩೨ ಕೋಟಿ ವ್ಯವಹಾರ ನಡೆಸಿ ರೂ. ೨೮. ೨೭ ಲಕ್ಷ ಲಾಭವನ್ನು ಗಳಿಸಿದ್ದು, ಸದಸ್ಯರಿಗೆ ಶೇ. ೧೨ರಷ್ಟು ಡಿವಿಡೆಂಟನ್ನು ಮಹಾಸಭೆಯಲ್ಲಿ ಘೋಷಣೆ ಮಾಡಲಾಗುತ್ತದೆ. ಹಾಗೆಯೇ ಸಂಘದಿAದ ಟಿ. ಶೆಟ್ಟಿಗೇರಿಯಲ್ಲಿ ನೂತನ ಶಾಖೆ ಆರಂಭಿಸುವ ಹಾಗೂ ಗೋಣಿಕೊಪ್ಪದಲ್ಲಿ ಇರುವ ಶಾಖೆಗೆ ಸ್ವಂತ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಅರಮಣಮಾಡ ಎಸ್. ಬೋಪಯ್ಯ ಅವರು ವಿವರಿಸಿದರು.

ಸಂಘದ ಸಭಾಂಗಣದಲ್ಲಿ ಮಹಾಸಭೆ ಪೂರ್ವಭಾವಿ ಆಡಳಿತ ಮಂಡಳಿಯ ಸಭೆಯಲ್ಲಿ ಅವರು ಈ ಬಗ್ಗೆ ವಿವರಣೆ ನೀಡಿದರು.

ಸಹಕಾರ ಸಂಘದಲ್ಲಿ ಪಾರದರ್ಶಕತೆಯಿಂದ ಕೆಲಸ ಕಾರ್ಯಗಳು ನಡೆಯುತ್ತಾ ಬರುತ್ತಿದೆ. ಸದಸ್ಯರಿಂದಲೂ ಹಾಗೂ ಸದಸ್ಯರೇತರರಿಂದಲೂ ನಿರಖು ಠೇವಣಿ, ಸಂಚಯ ಠೇವಣಿ, ದೈನಂದಿನ ಠೇವಣಿ, ತ್ರಿಪ್ಟ್ ಠೇವಣಿ ಹೀಗೆ ವಿವಿಧ ರೀತಿಯ ಠೇವಣಿಯಾಗಿ ರೂ. ೨೪.೫೧ ಕೋಟಿ ಠೇವಣಿಯನ್ನು ಸಂಘ ಹೊಂದಿರುತ್ತದೆ. ಸದಸ್ಯರಿಗೆ ಮತ್ತು ಸದಸ್ಯರೇತರಿಗೂ ವಿವಿಧ ರೀತಿಯ ಸಾಲಗಳು ಅಂದರೆ ವ್ಯವಸಾಯ ಅಭಿವೃದ್ಧಿ ಸಾಲ, ಆಭರಣ ಸಾಲ, ಗೃಹ ನಿರ್ಮಾಣ ಸಾಲ, ಪಿಗ್ಮಿ ಸಾಲ, ವಾಹನ ಸಾಲ ಕೃಷಿಯಂತ್ರೋಪಕರಣ ಸಾಲ ಸೇರಿ ರೂ. ೨೦.೩೮ ಕೋಟಿ ಸಾಲ ವಿತರಿಸಲಾಗಿದೆ. ಸಾಲಗಳ ವಸೂಲಾತಿಯು ಶೇ. ೯೪ ರಷ್ಟಿದ್ದು ಸಾಲದಲ್ಲಿ ಯಾವುದೇ ರೀತಿಯ ಎನ್.ಪಿ.ಎ. ಇರುವುದಿಲ್ಲ. ಇದಕ್ಕೆ ಮಂಡಳಿಯ ನಿಯಮ ಬದ್ಧ ಸೇವೆ, ಕಾನೂನು ಬದ್ಧವಾಗಿದ್ದು ಹಾಗೂ ಸದಸ್ಯರ ಸಹಕಾರದಿಂದ ಅಭಿವೃದ್ಧಿ ಹೊಂದುತ್ತಿರುವುದು, ಸಹಕಾರಿಯಲ್ಲಿ ಠೇವಣಾಧಿ ಭದ್ರತೆಯ ದೃಷ್ಟಿಯಿಂದ ಇತರ ಬ್ಯಾಂಕುಗಳಲ್ಲಿ ರೂ.೭.೫೨ ಕೋಟಿ ವಿನಿಯೋಗ ಮಾಡಲಾಗಿದೆ ಎಂದು ವಿವರಿಸಿದರು.

ಸಂಘವು ೧೮೫೪ ಸದಸ್ಯರನ್ನು ಹೊಂದಿದ್ದು, ಸಂಸ್ಥೆಯ ಸದಸ್ಯರಿಗೆ ವಯೋಮಿತಿಗೆ ಅನುಗುಣವಾಗಿ ಮರಣ ನಿಧಿ ರೂ ೧೦ ಸಾವಿರ ಹಾಗೂ ಸಹಕಾರಿ ಜೀವ ನಿಧಿ ರೂ. ೧ ಲಕ್ಷ ಅವರ ನಾಮಿನಿಗೆ ಕೊಡಲಾಗುವುದು. ಸಾಲ ಪಡೆದು ಸುಸ್ತಿಯಾಗದೆ ಮೃತಪಟ್ಟಲ್ಲಿ ಸಾಲಗಾರರ ಕ್ಷೇಮಾಭಿವೃದ್ಧಿ ನಿಧಿಯಿಂದ ನಿಬಂಧನೆಗೆ ಒಳಪಟ್ಟು ಒಂದು ಲಕ್ಷದ ಮಿತಿಯೊಳಗೆ ಮನ್ನಾ ಮಾಡಿಕೊಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ರೂ. ೨.೪೧ ಲಕ್ಷ ಸಾಲವನ್ನು ಆರು ಜನ ಮೃತಪಟ್ಟ ಸಾಲಗಾರ ಸದಸ್ಯರ ಸಾಲ ಮನ್ನಾ ಮಾಡಲಾಗಿರುತ್ತದೆ. ಇದು ಯಾವುದೇ ಸಹಕಾರಿ ಸಂಸ್ಥೆಯಲ್ಲಿ ಇಲ್ಲದೆ ಈ ವ್ಯವಸ್ಥೆ ನಮ್ಮ ಸಹಕಾರ ಸಂಘದಲ್ಲಿ ಅಳವಡಿಸಲಾಗಿರುತ್ತದೆ ಎಂದು ನಾವು ತಿಳಿಸಲು ಹರ್ಷ ವ್ಯಕ್ತಪಡಿಸುತ್ತೇವೆ ಸಂಸ್ಥೆಯ ಲೆಕ್ಕಪತ್ರವನ್ನು ಆಧುನಿಕವಾಗಿ ಗಣಕೀಕರಿಸಲಾಗಿದೆ ಎಂದು ಅವರು ತಿಳಿಸಿದರು.

ಸದಸ್ಯರಿಗೆ ಸಂಘದಿAದ ಸೇವಾ ಸೌಲಭ್ಯಗಳನ್ನು ಲಾಕರ್ ಸೌಲಭ್ಯ, ಇ ಸ್ಟಾö್ಯಂಪಿAಗ್, ಮೊಬೈಲ್ ಹಾಗೂ ಟಿವಿ ರಿಚಾರ್ಜ್ ರೈಲ್ವೆ ಟಿಕೆಟ್ ಬುಕಿಂಗ್, ಆರ್.ಟಿ.ಸಿ ಸೇವಾ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದ ಅವರು ಸಂಸ್ಥೆಯಲ್ಲಿ ಆರು ಪಿಗ್ಮಿ ಸಂಗ್ರಹಗಾರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.

ಸಂಸ್ಥೆಯು ಗೋಣಿಕೊಪ್ಪದಲ್ಲಿ ಶಾಖೆಯನ್ನು ಹೊಂದಿದ್ದು, ಈ ಶಾಖೆಯು ಪ್ರಸಕ್ತ ವರ್ಷದಲ್ಲಿ ರೂ.೮.೧೬ ಲಕ್ಷ ನಿವ್ವಳ ಲಾಭಗಳಿಸಿದ್ದು ಗೋಣಿಕೊಪ್ಪ ಪಟ್ಟಣದಲ್ಲಿ ನಿವೇಶನ ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸುವ ಹಾಗೂ ಟಿ.ಶೆಟ್ಟಿಗೇರಿಯಲ್ಲಿ ಸೂಕ್ತ ನಿವೇಶನ ಅಥವಾ ಕಟ್ಟಡ ದೊರೆತರೆ ನೂತನ ಶಾಖೆಯನ್ನು ಆರಂಭಿಸುವ ಯೋಜನೆ ಇರುವುದಾಗಿ ವಿವರಿಸಿದರು.

ಸಂಸ್ಥೆಯ ಕಟ್ಟಡದಲ್ಲಿ ಸಭಾಂಗಣವನ್ನು ಹೊಂದಿದ್ದು ಸಭೆ ಸಮಾರಂಭಗಳಿಗೆ ಸದಸ್ಯರಿಗೂ ಮತ್ತು ಸದಸ್ಯರೇತರರಿಗೂ ಕೊಡಲಾಗುತ್ತದೆ. ಸಂಘದ ವಾರ್ಷಿಕ ಮಹಾಸಭೆ ೧೬. ೦೯. ೨೦೨೪ರಂದು ಸಂಘದ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಅವರು ವಿವರಿಸಿದರು.

ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷ ಚಿರಿಯಪಂಡ.ಕೆ ಕಾಶಿಯಪ್ಪ, ನಿರ್ದೇಶಕರುಗಳಾದ ಮದ್ರೀರ ಸೋಮಯ್ಯ, ಕಡೆಮಾಡ ಭೀಮಯ್ಯ, ಕಳ್ಳಿಚಂಡ ಕುಶಾಲಪ್ಪ, ಕಬ್ಬಚ್ಚಿರ ಚಿದಂಬರ, ಐನಂಡ ಮಂದಣ್ಣ, ಮುದ್ದಿಯಡ ಪ್ರಕಾಶ್, ಕಳ್ಳಿಚಂಡ ಪೂಣಚ್ಚ, ಗುಮ್ಮಟ್ಟಿರ ಜಿ. ಗಂಗಮ್ಮ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಕೂಕಂಡ ಎಸ್. ಕಾವೇರಪ್ಪ, ಕೋದೇಂಗಡ ಸುರೇಶ್, ಮಾಣಿಪಂಡ ಪಾರ್ವತಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮದ್ರೀರ ಗಣಪತಿ ಹಾಜರಿದ್ದರು.