ಮಡಿಕೇರಿ, ಸೆ. ೧೪: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರುಗಳಿಗೆ ಕಳೆದ ಎರಡು ತಿಂಗಳಿನಿAದ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಇಂದು ೪೦ಕ್ಕೂ ಅಧಿಕ ಚಾಲಕರು ಬಸ್ ಸಂಚಾರ ಸ್ಥಗಿತಗೊಳಿಸಿ ದಿಢೀರ್ ಪ್ರತಿಭಟನೆ ನಡೆಸಿದರು.

ಬೆಂಗಳೂರು ಮೂಲದ ಪೂಜ್ಯಾಯ ಸೆಕ್ಯೂರಿಟಿ ಸರ್ವಿಸಸ್ ಸಂಸ್ಥೆ ಮೂಲಕ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ಚಾಲಕರಾಗಿ ಸಾರಿಗೆ ಸಂಸ್ಥೆಗೆ ನಿಯೋಜನೆ ಮಾಡಲಾಗಿದೆ. ಈ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೪೦ಕ್ಕೂ ಅಧಿಕ ಮಂದಿ ಚಾಲಕರಿಗೆ ಕಳೆದ ಎರಡು ತಿಂಗಳಿನಿAದ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ದಿಢೀರಾಗಿ ಬಸ್‌ಗಳನ್ನು ನಿಲ್ಲಿಸಿ ಮಡಿಕೇರಿ ಘಟಕದೆದುರು ಪ್ರತಿಭಟನೆ ನಡೆಸಿದರು.

(ಮೊದಲ ಪುಟದಿಂದ) ವೇತನ ಪಾವತಿಯಾಗಿಲ್ಲ; ಸಾರಿಗೆ ಸಂಸ್ಥೆಯ ಚಾಲಕರಾಗಿದ್ದರೂ ಬಸ್‌ನಲ್ಲಿ ಪ್ರಯಾಣಿಸಲು ಪಾಸ್ ವ್ಯವಸ್ಥೆ ಕೂಡ ನೀಡಿಲ್ಲ. ವೇತನ ಪಾವತಿಯಾಗುವವರೆಗೂ ಬಸ್ ಚಾಲಿಸದೆ ಪ್ರತಿಭಟನೆ ನಡೆಸುವುದಾಗಿ ಚಾಲಕರು ಹೇಳಿದರು. ಘಟಕದ ವ್ಯವಸ್ಥಾಪಕರು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರಾದರೂ ಜಗ್ಗದ ಚಾಲಕರು ಪ್ರತಿಭಟನೆ ಮುಂದುವರೆಸಿದರು.

ಚಾಲಕರ ದಿಢೀರ್ ಮುಷ್ಕರದಿಂದಾಗಿ ಕೊಡಗು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಗೆ ತೆರಳಬೇಕಾಗಿದ್ದ ೪೦ಕ್ಕೂ ಅಧಿಕ ಬಸ್‌ಗಳು ಸ್ಥಗಿತಗೊಂಡು ಪ್ರಯಾಣಿಕರು ಪ್ರಯಾಸಪಡಬೇಕಾದ ಪ್ರಸಂಗ ಎದುರಾಯಿತು.

ಸ್ತಿçÃಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಬಸ್ ಸಂಚಾರ ಒದಗಿಸಲಾಗಿದ್ದು, ಬಸ್‌ಗಳಿಗೆ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ಸರಕಾರದ ವತಿಯಿಂದ ಖಾಸಗಿ ಏಜೆನ್ಸಿಗಳ ಮೂಲಕ ನೇಮಕ ಮಾಡಲಾಗಿದೆ. ಇದೀಗ ವೇತನವಿಲ್ಲದೆ ಚಾಲಕರು ಪ್ರತಿಭಟಿಸುವಂತಾಗಿದೆ.