ಮಡಿಕೇರಿ, ಸೆ. ೧೫: ಕೊಡಗು ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್ ೧೦೪ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಭೋದಕ ಆಸ್ಪತ್ರೆ ಮಡಿಕೇರಿ ಇದರ ಸಹಯೋಗದಲ್ಲಿ ಜಿಲ್ಲೆಯ ಜನತೆಗೆ ಅನುಕೂಲವಾಗುವಂತೆ ಸೆ. ೧೮ರ ಬುಧವಾರದಂದು ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಿದೆ.

ಶಿಬಿರದಲ್ಲಿ ನೇತ್ರದಾನ, ಅ.ಭಾ. ನೋಂದಣಿ ಸೇರಿದಂತೆ ಯಶಸ್ವಿನಿ ಯೋಜನೆಯ ಬಗ್ಗೆ ಮಾಹಿತಿ ನೀಡಲಾಗುವುದು. ಆಸಕ್ತರು ಜಿಲ್ಲೆಯ ಖಾಯಂ ನಿವಾಸಿಯಾಗಿದ್ದು, ಮೂಲ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯನ್ನು ಹೊಂದಿದ್ದು, ತಪಾಸಣಾ ಶಿಬಿರದಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕಿದೆ. ಡಿ.ಸಿ.ಸಿ. ಬ್ಯಾಂಕ್‌ನ ಉನ್ನತಿ ಸಭಾಭವನದಲ್ಲಿ ತಾ. ೧೮ರಂದು ಬೆಳಿಗ್ಗೆ ೯ ರಿಂದ ೩ ಗಂಟೆಯತನಕ ಶಿಬಿರ ನಡೆಯಲಿದೆ. ಆದ್ಯತೆ ಮೇರೆ ನೋಂದಣಿ ಮಾಡಿದವರಿಗೆ ಅವಕಾಶ ನೀಡಲಾಗುವುದು ಭಾಗವಹಿಸುವವರು ೭೮೯೯೭೬೮೩೨೭ ಅಥವಾ ೭೮೯೯೭೬೮೩೨೯ ಸಂಖ್ಯೆಗೆ ತಾ. ೧೭ರ ಸಂಜೆ ೪ ಗಂಟೆಯೊಳಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದೆAದು ಡಿ.ಸಿ.ಸಿ. ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.