ಮಡಿಕೇರಿ, ಸೆ. ೧೫: ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ, ಮಡಿಕೇರಿ ಘಟಕದ ವತಿಯಿಂದ ಉತ್ತರಾಖಂಡದ ಚಾರ್ಧಾಂ (ಗಂಗೋತ್ರಿ, ಯಮುನೋತ್ರಿ, ಕೇದಾರ್ನಾಥ್, ಭದ್ರಿನಾಥ್) ಚಾರಣ ಕಾರ್ಯಕ್ರಮಕ್ಕೆ ತೆರಳಲಿರುವ ಜಿಲ್ಲೆಯ ೩೧ ಚಾರಣಿಗರಿಗೆ ನಗರದ ಭಾರತೀಯ ವಿದ್ಯಾಭವನದಲ್ಲಿ ಬೀಳ್ಕೊಡುಗೆ ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಅರಣ್ಯ ಇಲಾಖೆಯ ಮಡಿಕೇರಿ ಡಿಎಫ್ಓ ಭಾಸ್ಕರ್ ಅವರು ವಹಿಸಿಕೊಂಡು ಚಾರಣಿಗರಿಗೆ ಶುಭಾಶಯ ಕೋರಿ ಬೀಳ್ಕೊಟ್ಟರು. ಸಮಾರಂಭದಲ್ಲಿ ಘಟಕದ ತಾಲೂಕು ಅಧ್ಯಕ್ಷ ಎ.ಎ. ಮನು ಅಯ್ಯಣ್ಣ, ಜಿಲ್ಲಾಧ್ಯಕ್ಷ ರಾಜಶೇಖರ್, ಸದಸ್ಯ ಬಾಲಾಜಿ ಡಾ. ಪಾಟ್ಕರ್ ಅವರು ಭಾಗವಹಿಸಿದ್ದರು. ರಾಜ್ಯ ಘಟಕದ ಸದಸ್ಯ ಚೋಡುಮಾಡ ಎ. ಅಯ್ಯಣ್ಣ ಸ್ವಾಗತಿಸಿ, ವಂದಿಸಿದರು. ಚಾರಣ ಕಾರ್ಯಕ್ರಮ ತಾ. ೧೭ರಿಂದ ೨೭ರ ವರೆಗೆ ೧೦ ದಿನಗಳವರೆಗೆ ನಡೆಯಲಿದೆ.