ಪೊನ್ನಂಪೇಟೆ, ಸೆ. ೧೩: ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಗೋಣಿಕೊಪ್ಪಲು ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯ ೧೧ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜು ಹಾಗೂ ಕೊಡಗು ಜಿಲ್ಲಾ ಬಾಕ್ಸಿಂಗ್ ಅಸೋಸಿಯೇಷನ್, ಪದವಿಪೂರ್ವ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಬಾಕ್ಸಿಂಗ್ ಚಾಂಪಿಯನ್-ಶಿಪ್ ಅನ್ನು ಗೋಣಿಕೊಪ್ಪಲು ಪ್ರೌಢಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕುಪ್ಪಂಡ ಗಣೇಶ್, ರಾಷ್ಟಿçÃಯ ಬಾಕ್ಸಿಂಗ್ ತರಬೇತುದಾರ ದೇಯಂಡ ಕೆ. ಮೇದಪ್ಪ ಹಾಗೂ ಕಾವೇರಿ ಕಾಲೇಜು ಕ್ಯಾಂಪಸ್ ವ್ಯವಸ್ಥಾಪಕ ಮಿನ್ನಂಡ ಜೋಯಪ್ಪ ಉದ್ಘಾಟಿಸಿದರು.
ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗೋಣಿಕೊಪ್ಪಲು ಕಾ.ಪ.ಪೂರ್ವ ಕಾಲೇಜು, ಅರ್ವತೋಕ್ಲು ವಿದ್ಯಾನಿಕೇತನ ಪ.ಪೂ. ಕಾಲೇಜು, ಅರಮೇರಿ ಎಸ್.ಎಂ.ಎಸ್. ಪ.ಪೂ. ಕಾಲೇಜು, ಪೊನ್ನಂಪೇಟೆ ಸಿ.ಐ.ಪಿ.ಯೂ ಕಾಲೇಜು, ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನಿಂದ ಸೇರಿದಂತೆ ಒಟ್ಟು ೨೩ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ ಬಾಲಕರ ವಿಭಾಗದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿ ಪಿ.ಯು. ಹರ್ಷ ಅಯ್ಯಪ್ಪ, ಸಿ.ಐ.ಪಿ.ಯು. ಕಾಲೇಜಿನ ಧ್ಯಾನ್ ಗಣಪತಿ, ಎಸ್.ಎಂ.ಎಸ್.ಪಿ.ಯು ಕಾಲೇಜಿನ ಕೆ.ಬಿ. ರಮೀಸ್, ಎಂ.ಎ. ಅಫ್ವಾನ್, ಬಾಲಕಿಯರ ವಿಭಾಗದಲ್ಲಿ ಕಾವೇರಿ ಪ.ಪೂ. ಕಾಲೇಜಿನ ಬಿ.ಬಿ. ಪಂಚಮಿ, ಯು.ಎನ್. ಅರ್ಚನ, ಸಂಜನ ಹೆಚ್. ಆರ್., ವಿದ್ಯಾನಿಕೇತನ ಪಿ.ಯು. ಕಾಲೇಜಿನ ಎ.ಪಿ. ಘನಿಕ ದೇವಮ್ಮ, ಖಾನ ಅಪ್ಪಯ್ಯ, ಲತಿಕ ಎ.ಎ. ಬಡಿಗಾರ್, ಸಿ.ಐ.ಪಿ.ಯು ಕಾಲೇಜಿನ ಎ.ಎಸ್. ಪೊನ್ನಮ್ಮ ಸೇರಿದಂತೆ ೧೧ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಐ.ಎನ್.ಎಸ್. ಬಾಕ್ಸಿಂಗ್ ತರಬೇತುದಾರ ಶರತ್, ರಾಷ್ಟಿçÃಯ ಬಾಕ್ಸಿಂಗ್ ಪಟುಗಳಾದ ಕಾರ್ತಿಕ್, ಪ್ರಜ್ವಲ್, ಚೆಪ್ಪುಡಿರ ಕಾವೇರಮ್ಮ, ಜೈ ಜವಾನ್ ಡಿಫೆನ್ಸ್ ಟ್ರೆöÊನಿಂಗ್ ಸೆಂಟರ್ನ ನಿರ್ದೇಶಕ ಅಮ್ಮಣಿಚಂಡ ಲವನ್ ಮಾದಪ್ಪ, ದೈಹಿಕ ಶಿಕ್ಷಣ ನಿರ್ದೇಶಕರಾದ ಎಂ.ಟಿ. ಸಂತೋಷ್, ಶರತ್ ಕುಮಾರ್, ರಾಜರೈ ಉಪಸ್ಥಿತರಿದ್ದರು.