ಮಡಿಕೇರಿ, ಸೆ. ೧೩: ಮಡಿಕೇರಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣ ಕುರಿತು ತಹಶೀಲ್ದಾರ್ ಪ್ರವೀಣ್ ಪ್ರತಿಕ್ರಿಯಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ ಪ್ರಜ್ವಲ್ (೪೧) ತಹಶೀಲ್ದಾರ್ ಸಹಿ ನಕಲು ಮಾಡಿರುವುದು ಬಹಿರಂಗಗೊAಡ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿರುವುದು ವಾಸ್ತವಾಂಶ ಎಂದು ಪ್ರವೀಣ್ ತಿಳಿಸಿದ್ದಾರೆ.