ವೀರಾಜಪೇಟೆ, ಸೆ. ೧೩: ವೀರಾಜಪೇಟೆ ಕೊಡವ ಸಮಾಜ ವತಿಯಿಂದ ತಾ.೨೨ರಂದು ಬೆಳಿಗ್ಗೆ ೧೦ ಗಂಟೆಗೆ ಕೊಡವ ಜನಾಂಗದವರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ವಾಲಗತಾಟ್ ಪೈಪೋಟಿ, ಭಾರದ ಕಲ್ಲು ಎಸೆಯುವ ಸ್ಪರ್ಧೆ ಸೇರಿದಂತೆ ಇನ್ನಿತರ ಕ್ರೀಡಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಮಂಡಳಿ ಪ್ರಕಟಣೆ ತಿಳಿಸಿದೆ.