ನಾಪೋಕ್ಲು, ಸೆ. ೧೩: ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೪ನೇ ಸಾಲಿನಲ್ಲಿ ರೂ. ೨೫.೦೪ ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕಲ್ಯಾಟಂಡ ಎ.ತಮ್ಮಯ್ಯ ತಿಳಿಸಿದರು. ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ೧೧೩೭ ಜನ ಸದಸ್ಯರಿಂದ ರೂ. ೧೦೩.೩೬ ಲಕ್ಷ ಪಾಲು ಹಣ ಇರುತ್ತದೆ. ಸಂಘದಲ್ಲಿ ಒಟ್ಟು ದುಡಿಯುವ ಬಂಡವಾಳ ರೂ. ೧೭೩೨.೯೧ ಲಕ್ಷ ಗಳಾಗಿರುತ್ತವೆ ಎಂದರು. ಸಂಘದಿAದ ೩೩೯ ಜನ ರೈತರಿಗೆ ಕೆಸಿಸಿ ಸಾಲ ರೂ. ೭೮೦.೫೪ ಲಕ್ಷ ವಿತರಿಸ ಲಾಗಿದೆ. ಜಾಮೀನು ಸಾಲ ರೂ. ೭೪೫೦ ಲಕ್ಷ ಗೊಬ್ಬರ ಸಾಲ ರೂ. ೩೫.೬೬ ಲಕ್ಷ ವಿತರಿಸಲಾಗಿದೆ. ಸಂಘದ ಸದಸ್ಯರಿಗೆ ಶೇಕಡ ೧೨ ಡಿವಿಡೆಂಡ್ ನೀಡುವಂತೆ ಸಭೆಯಲ್ಲಿ ನಿರ್ಣಯಿಸ ಲಾಗಿದ್ದು ಸಂಘದಲ್ಲಿ ಗ್ರಾಹಕರಿಗೆ ಗೊಬ್ಬರ ಕೃಷಿ ಉಪಕರಣ ಮುಂತಾದ ಸಾಮಗ್ರಿಗಳು ಲಭ್ಯವಿದೆ ಎಂದು ಮಾಹಿತಿ ನೀಡಿದರು. ಸಂಘದ ಮಹಾಸಭೆಯು ತಾ. ೨೩ ರಂದು ಸಂಘದ ಸಭಾಂಗಣದಲ್ಲಿ ಜರುಗಲಿದೆ.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಪರದಂಡ ಪಿ. ಪ್ರಮಿಳಾ ಪೆಮ್ಮಯ್ಯ, ನಿರ್ದೇಶಕರಾದ ಅಲ್ಲಾರಂಡ ಎಸ್. ಅಯ್ಯಪ್ಪ, ಬಡಕಡ ಎಂ. ಬೆಳ್ಳಿಯಪ್ಪ, ಕಲಿಯಂಡ ಬೋಪಣ್ಣ, ನಿಡುಮಂಡ ಹರೀಶ್ ಪೂವಯ್ಯ, ನಂಬಡಮAಡ ಬಿ. ಸುನೀತ, ಎ.ಎಸ್. ಲಕ್ಷö್ಮಣ, ಪಾಲೇ ಟಿ. ಕಾರ್ಯಪ್ಪ, ಕುಡಿಯರ ಬಿ. ಅಚ್ಚಯ್ಯ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಮಂಜುಳಾ ಹಾಗೂ ಸಿಬ್ಬಂದಿ ಹಾಜರಿದ್ದರು.