*ಗೋಣಿಕೊಪ್ಪ, ಸೆ. ೧೩: ಹರಿಶ್ಚಂದ್ರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ವೀರಾಜಪೇಟೆ ಮಂಡಲ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ ಸದಸ್ಯತ್ವ ಅಭಿಯಾನ ಕಾರ್ಯಾಗಾರದಲ್ಲಿ ಹುದಿಕೇರಿ ಪ್ಯಾಕ್ಸ್ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಬೆಂಬಲಿತ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಭಾರತೀಯ ಜನತಾ ಪಾರ್ಟಿ ವೀರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಅಧ್ಯಕ್ಷತೆಯಲ್ಲಿ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ ಕುಮಾರ್, ಕಾರ್ಯದರ್ಶಿ ಗುಮ್ಮಟಿರ ಕಿಲನ್ ಗಣಪತಿ, ಉಪಾಧ್ಯಕ್ಷ ಅರುಣ್ ಭೀಮಯ್ಯ, ತಾಲೂಕು ಮಂಡಲ ಪ್ರಧಾನ ಕಾರ್ಯದರ್ಶಿ ಮುದ್ದಿಯಡ ಮಂಜು ಗಣಪತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೆರ ಬಾಂಡ್ ಗಣಪತಿ, ತಾಲೂಕು ಮಂಡಲ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ ಇವರುಗಳು, ಹುದಿಕೇರಿ ಪ್ಯಾಕ್ಸ್ ಚುನಾವಣೆಯಲ್ಲಿ ಜಯಗಳಿಸಿದ ಅಜ್ಜಿಕುಟ್ಟೀರ ಪ್ರವೀಣ್, ಚೇಂದಿರ ರಘು ತಿಮ್ಮಯ್ಯ, ಬಿ.ಎಸ್ ರಮೇಶ್, ಕೋಳೆರ ನರೇಂದ್ರ, ಮತ್ರಂಡ ಬೋಪಣ್ಣ, ಕಿರಿಯಮಾಡÀ ಈಶ ಮಂದಣ್ಣ, ಅಜ್ಜಿಕುಟ್ಟೀರ ಬೋಪಣ್ಣ, ತೀತಿರ ಊರ್ಮಿಳ, ಕಳ್ಳೇಂಗಡ ಗಾಯತ್ರಿ, ಕಾಳಿಮಾಡ ನರೇಂದ್ರ, ರಾಜಪ್ಪ ಹೆಚ್.ಕೆ, ಗಂಗು ಇವರನ್ನು ಸನ್ಮಾನಿಸಿದರು.