ವೀರಾಜಪೇಟೆ, ಸೆ. ೧೩: ೨೦೨೩-೨೪ನೇ ಸಾಲಿನಲ್ಲಿ ಒಟ್ಟು ೪೦,೫೧೩ ಕೆ.ಜಿ. ಜೇನು ಸಂಗ್ರಹಿಸಲಾಗಿದ್ದು ಈ ಪೈಕಿ ೪೭,೪೭೧,೦೫೨ ಕೆ.ಜಿ. ಜೇನನ್ನು ಸಂಸ್ಕೃರಿಸಿ ಮಾರಾಟ ಮಾಡಲಾಗಿದೆ. ವ್ಯಾಪಾರ ಮಳಿಗೆ, ಮನೆ ಬಾಡಿಗೆ, ೨೬,೧೬,೮೪೪ ಜಮಾ ಆಗಿರುತ್ತದೆ. ಬ್ಯಾಂಕುಗಳಲ್ಲಿ ಹೂಡಿರುವ ಹೂಡಿಕೆಗಳಿಂದ ರೂ. ೧೧,೬೨,೭೭೬. ಬಡ್ಡಿ ಜಮಾ ಆಗಿದ್ದು, ವರದಿ ಸಾಲಿನಲ್ಲಿ ಒಟ್ಟು ೧,೫೨,೩೫,೫೨೨ ರೂ.ಗಳ ವ್ಯಾಪಾರ ವಹಿವಾಟು ನಡೆಸಲಾಗಿದ್ದು ೨೦೨೩-೨೪ ಸಾಲಿಗೆ ರೂ. ೧೧,೧೫,೫೯೫ ನಿವ್ವಳ ಲಾಭ ಗಳಿಸಿದೆ ಎಂದು ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘ ನಿಯಮಿತದ ಅಧ್ಯಕ್ಷ ಕಂಜಿತAಡ ಮಂದಣ್ಣ ಹೇಳಿದರು.

ವೀರಾಜಪೇಟೆ ಮಹಿಳಾ ಸಮಾಜದಲ್ಲಿ ನಡೆದ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ೨೧೩೮ ಸದಸ್ಯರಿದ್ದಾರೆ. ಜೇನು ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಕನಿಷ್ಟ ಒಂದು ಜೇನು ಪೆಟ್ಟಿಗೆಯನ್ನು ಸಂಘದಿAದ ಖರೀದಿಸಿ ಜೇನು ಕೃಷಿಯನ್ನು ಕೈಗೊಳ್ಳುವವರಿಗೆ ಮಾತ್ರ ಸದಸ್ಯತ್ವವನ್ನು ನೀಡಲಾಗುತ್ತಿದೆ. ಅದರಂತೆ ಪ್ರಸಕ್ತ ಸಾಲಿನಲ್ಲಿ ೨೧ ಜನರು ಸದಸ್ಯತ್ವ ಪಡೆದುಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ೯ ಸದಸ್ಯರು ಮೃತಪಟ್ಟಿದ್ದು ಸದಸ್ಯತ್ವದ ಪಾಲು ಮೊತ್ತವನ್ನು ಅವರ ನಾಮಿನಿಗೆ ನೀಡಲಾಗಿದೆ. ಸಾಲಿನ ಅಂತ್ಯಕ್ಕೆ ಪಾಲು ಬಂಡವಾಳ ರೂ. ೧೭,೨೬,೦೨೯ ಆಗಿದೆ. ಸಂಘವು ಪ್ರಸ್ತುತ ೪ ಶಾಖೆಗಳನ್ನು ಹೊಂದಿದ್ದು ಶಾಖೆಗಳಲ್ಲಿ ಒಟ್ಟು ವ್ಯಾಪಾರ ರೂ. ೭೯,೦೪,೦೭೯ ವಹಿವಾಟು ನಡೆಸಲಾಗಿದೆ. ಸಂಘದ ಮರ ಘಟಕದಲ್ಲಿ ಜೇನುಪೆಟ್ಟಿಗೆ ತಯಾರಿಸಲು ಬೇಕಾದ ತೇಗದ ಮರದ ಬೆಲೆಯು ದುಬಾರಿಯಾಗಿದ್ದು ಕಡಿಮೆ ದರದಲ್ಲಿ ಮಾರಾಟ ಮಾಡಲು ಸಾಧ್ಯವಾಗದೆ ಇರುವುದರಿಂದ ಮರಘಟಕ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಸಕ್ತ ಸಾಲಿನಿಂದ ತೇಗದ ಮರದ ಬದಲಿಗೆ ಕಾಡು ಮರದ ಜೇನುಪೆಟ್ಟಿಗೆಯನ್ನು ತಯಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಾಡುಮರದ ಜೇನು ಪೆಟ್ಟಿಗೆಗೆ ರೂ ೨ ಸಾವಿರದಂತೆ, ಮತ್ತು ಹೊಸದಾಗಿ ೬ ಫ್ರೇಮಿನ ಕಾಡು ಮರದ ಜೇನು ಪೆಟ್ಟಿಗೆಯನ್ನು ೧೩೦೦ ರೂಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಸಂಘದ ವ್ಯಾಪಾರ ವಹಿವಾಟನ್ನು ಹೆಚ್ಚಿಸಲು ಖರೀದಿಸಿರುವ ಮೊಬೈಲ್ ವಾಹನದ ಮೂಲಕ ಜೇನು ವ್ಯಾಪಾರ ಕೈಗೊಂಡಿದ್ದು ಪ್ರಸಕ್ತ ಸಾಲಿನಲ್ಲಿ ಒಟ್ಟು ರೂ ೧೯,೭೬,೦೯೪ ಜಮೆ ಆಗಿರುತ್ತದೆ. ಹಾಗೂ ಇಂಧನ ವಿಮೆ ಇತ್ಯಾದಿಗಳಿಗೆ ೧,೬೪,೮೭೨.೦೦ ರೂ.ಗಳು ವೆಚ್ಚವಾಗಿದೆ. ಭಾಗಮಂಡಲದಲ್ಲಿ ಸಂಘದ ಹೆಸರಿನಲ್ಲಿರುವ ನಿವೇಶನಗಳ ಭೂ ಪರಿವರ್ತನೆ ನಡೆಸಲು ಪತ್ರ ವ್ಯವಹಾರ ನಡೆಸಲಾಗುತ್ತಿದೆ. ಜೇನು ಕೃಷಿಯನ್ನು ಉತ್ತೇಜಿಸಲು ಆಸಕ್ತ ಜೇನು ಕೃಷಿಕರಿಗೆ ಉತ್ತಮ ಗುಣಮಟ್ಟದ ಸಾಧಾರಣ ಮರದ ೮ ಫ್ರೇಮಿನ ಕಾಡು ಮರದ ಜೇನು ಪೆಟ್ಟಗೆಗಳನ್ನು ತಲಾ ೨ ಸಾವಿರದಂತೆ, ೬ ಫ್ರೇಮಿನ ಕಾಡು ಮರದ ಜೇನು ಪೆಟ್ಟಿಗೆಗಳನ್ನು ೧೦೦ ರೂ.ಗಳಿಗೆ ಮಾರಾಟ ಮಾಡ ಲಾಗುತ್ತದೆ. ಜೇನು ಕೃಷಿಕರಿಗೆ ಸಹಕಾರಿ ಯಾಗಲು ಸಂಘದ ಮೂಲಕವೇ ಉಚಿತ ಮಾಹಿತಿ ಹಾಗು ತರಬೇತಿ ಯನ್ನು ನೀಡಲಾಗುತ್ತಿದೆ. ಸಂಘದ ಮಲಬಾರ್ ರಸ್ತೆಯಲ್ಲಿರುವ ಕಟ್ಟಡ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ವಿಚಾರದಲ್ಲಿ ಕಲಂ ೬೫ ಅಡಿಯಲ್ಲಿ ಇಲಾಖಾ ತನಿಖೆ ನಡೆಸಲು ಪತ್ರ ವ್ಯವಹಾರ ನಡೆಸಿರುವ ಬಗ್ಗೆ ಸದಸ್ಯರುಗಳು ಮಾಹಿತಿ ಬಯಸಿದಾಗ ಇಲಾಖಾ ಅಧಿಕಾರಿಗಳು ತನಿಖೆಗೆ ಸ್ಪಂದಿಸುತ್ತಿಲ್ಲ. ಲೋಕಾಯುಕ್ತಕ್ಕೂ ದೂರು ನೀಡಲಾಗಿದ್ದು ಅವರುಗಳು ಕೂಡ ಸ್ಪಂದಿಸುತ್ತಿಲ್ಲ ಎಂದು ಸಭೆಗೆ ಮಂದಣ್ಣ ಅವರು ಮಾಹಿತಿ ನೀಡಿದರು. ಈ ಸಂದರ್ಭ ರಾಜ್ಯ ಸಹಕಾರಿ ಆಯುಕ್ತರಿಗೆ ದೂರು ನೀಡಿ. ಅವರು ಸ್ಪಂದಿಸದಿದ್ದರೆ ಕಾನೂನು ತಜ್ಞರನ್ನು ನೇಮಿಸಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಸಭೆಯಲ್ಲಿನ ಸದಸ್ಯರು ಸಲಹೆ ಇತ್ತರು. ಸಭೆಯಲ್ಲಿ ಉಪಾಧ್ಯಕ್ಷ ಚೇನಂಡ ಸುರೇಶ್ ನಾಣಯ್ಯ, ಕೋಡಿರ ಚಂಗಪ್ಪ, ಚೆರಿಯಪಂಡ ರಾಜ ನಂಜಪ್ಪ, ಕಾದಿರ ಪಳಂಗಪ್ಪ, ಮೊಳ್ಳೆರ ಪೂಣಚ್ಚ, ಕಾಟುಮಣಿಯಂಡ ಉಮೇಶ್, ಕೊಲ್ಲಿರ ಗೋಪಿ ಚಿಣ್ಣಪ್ಪ, ಬಾಚಮಂಡ ಸುಬ್ರಮಣಿ, ಕುಡಿಯರ ತಮ್ಮಯ್ಯ, ಕೆ.ಬಿ ವಿಜಯನ್, ಹೆಚ್.ಪಿ ಉದಯ, ಅಮ್ಮೆಕಂಡ ದಮಯಂತಿ, ಪೊರ್ಕೊಂಡ ಸವಿತಾ ಬೋಪಣ್ಣ, ನಡಿಕೇರಿಯಂಡ ಶಿಲ್ಪಾ, ಹೆಚ್. ಆರ್ ರಾಮಕೃಷ್ಣ, ಕುಯ್ಯಮುಡಿ ತೀರ್ಥ ಕುಮಾರ್, ವ್ಯವಸ್ಥಾಪಕ ಕೆ.ವಿ. ತಿಮ್ಮಯ್ಯ ಉಪಸ್ಥಿತರಿದ್ದರು.