ಮಡಿಕೇರಿ, ಸೆ. ೧೨: ರಾಜ್ಯದಲ್ಲಿ ಹೈ ಸೆಕ್ಯೂರಿಟಿ ವಾಹನ ನೋಂದಣಿ ಫಲಕಗಳನ್ನು (ಹೆಚ್.ಎಸ್.ಆರ್.ಪಿ) ಅಳವಡಿಸಲು ತಾ.೧೫ ಕೊನೆಯ ದಿನವಾಗಿದ್ದು, ೨೦೧೯ ಏಪ್ರಿಲ್ ೧ ಕ್ಕಿಂತ ಹಿಂದೆ ನೋಂದಣಿಯಾಗಿರುವ ಎಲ್ಲಾ ವಾಹನಗಳು ಕಡ್ಡಾಯವಾಗಿ ನೂತನ ತಂತ್ರಜ್ಞಾನದ ವಾಹನ ನೋಂದಣಿ ಫಲಕವನ್ನು ಅಳವಡಿಸದಿದ್ದರೆ ದಂಡ ತೆರಬೇಕಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿನ ವಾಹನಗಳ ಮಾಲೀಕರು ಹೆಚ್.ಎಸ್.ಆರ್.ಪಿ ಅಳವಡಿಸಲು ಪಡುತ್ತಿರುವ ಕಷ್ಟ ಸೇರಿದಂತೆ ರಾಜ್ಯದಲ್ಲಿ ೨ ಕೋಟಿಗೂ ಮಿಗಿಲು ವಾಹನಗಳ ನೋಂದಣಿ ಆಗಬೇಕಿದ್ದರಿಂದ ನೂತನ ನಂಬರ್‌ಪ್ಲೇಟ್ ಅಳವಡಿಕೆಗೆ ಕೊನೆಯ ದಿನಾಂಕವನ್ನು ಸರಕಾರವು ಕಳೆದ ವರ್ಷದಿಂದ ೩ ಬಾರಿ ಮುಂದೂಡುತ್ತಾ ಬಂದಿತ್ತು. ೨೦೨೩ರ ನವೆಂಬರ್, ೨೦೨೪ರ ಫೆಬ್ರವರಿ ಹಾಗೂ ನಂತರದಲ್ಲಿ ಮೇ ತಿಂಗಳಿಗೆ ಡೆಡ್‌ಲೈನ್ ಅನ್ನು ಮುಂದೂಡುತ್ತಾ ಬರಲಾಗಿದ್ದು, ಮೇ ತಿಂಗಳಿನಲ್ಲಿ ರಾಜ್ಯದ ಕೇವಲ ಶೇ.೧೯ ರಷ್ಟು ವಾಹನಗಳು ಮಾತ್ರ ಹೆಚ್.ಎಸ್.ಆರ್.ಪಿ ಅಡಿ ನೋಂದಣಿಯಾಗಿದ್ದರಿAದ ಸೆಪ್ಟೆಂಬರ್‌ವರೆಗೆ ಈ ‘ಡೆಡ್‌ಲೈನ್’ಅನ್ನು ಹೆಚ್.ಎಸ್.ಆರ್.ಪಿ ತಯಾರಕಾ ಸಂಸ್ಥೆಯ ಮನವಿ ಮೇರೆಗೆ ಮುಂದೂಡಲಾಗಿದ್ದು, ತಾ.೧೫ರೊಳಗೆ ನೂತನ ನೋಂದಣಿ ಫಲಕ ಎಲ್ಲ ವಾಹನಗಳಲ್ಲಿ ಇರುವುದು ಕಡ್ಡಾಯವಾಗಿದೆ. ಈ ಅವಧಿಯನ್ನು ಮತ್ತೆ ವಿಸ್ತರಣೆ ಮಾಡುವುದಿಲ್ಲ ಎಂಬುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕೊಡಗಿನಲ್ಲಿ ೨೦೧೯ರ ಏಪ್ರಿಲ್ ೧ ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳ ಪೈಕಿ ಇದುವರೆಗೆ ೧ ಲಕ್ಷ ೧ ಸಾವಿರದ ೪೩೪ ವಾಹನಗಳು ಮಡಿಕೇರಿ ಪ್ರಾದೇಶಿಕ ಕಚೇರಿ ನೋಂದಣಿಯಡಿ ನೂತನ ಹೆಚ್.ಎಸ್.ಆರ್.ಪಿ ಅಳವಡಿಸಿವೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜಾಚಾರ್ ಅವರು ಮಾಹಿತಿ ಇತ್ತಿದ್ದಾರೆ. ಈ ಪೈಕಿ ೩,೩೬೨ ಲಘು ಸರಕು ವಾಹನಗಳು, ೫೬ ಭಾರಿ ಪ್ರಯಾಣಿಕ ವಾಹನಗಳು, ೪೧,೦೯೨ ಲಘು ವಾಹನಗಳು, ೮೮೭ ಲಘು ಪ್ರಯಾಣಿಕÀ ವಾಹನಗಳು, ೪೦೭ ಮಧ್ಯಮ ಸರಕು ವಾಹನಗಳು, ೭೦ ಮಧ್ಯಮ ಪ್ರಯಾಣಿಕ ವಾಹನಗಳು, ೨೦ ತ್ರಿಚಕ್ರ ವಾಹನಗಳು(ಖಾಸಗಿ ಸಂಚಾರ) , ೫೧,೪೭೫ ದ್ವಿಚಕ್ರ ವಾಹನಗಳು, ೩,೩೨೩ ತ್ರಿಚಕ್ರ ವಾಹನಗಳು (ಬಾಡಿಗೆ), ೨೯೦ ಭಾರಿ ಸರಕು ವಾಹನಗಳು ಹಾಗೂ ಇತರ ವಾಹನಗಳು ಸೇರಿ ಒಟ್ಟು ೧,೦೧,೪೩೪ ವಾಹನಗಳು ಹೆಚ್.ಎಸ್.ಆರ್.ಪಿ ಅಡಿ ನೋಂದಣಿಯಾಗಿವೆ. ಇವಿಷ್ಟು ವಾಹನಗಳು ೨೦೧೯ರ ಏಪ್ರಿಲ್ ೧ ರ ಹಿಂದೆ ನೋಂದಣಿಯಾಗಿದ್ದರಿAದ, ನೂತನವಾಗಿ ಹೆಚ್.ಎಸ್.ಆರ್.ಪಿ ಅಡಿ ಪುನರ್ ನೋಂದಣಿ ಆಗಿವೆ. ಇನ್ನೂ ಶೇ.೫೦ ರಷ್ಟು ಹಳೆ ವಾಹನಗಳು (೨೦೧೯ರ ಏಪ್ರಿಲ್ ೧ ರ ಹಿಂದೆ ನೋಂದಣಿಯಾದ) ಮಡಿಕೇರಿ ಪ್ರಾದೇಶಿಕ ಕಚೇರಿಯಲ್ಲಿ ನೋಂದಣಿಗೆ ಬಾಕಿ ಇರುವುದಾಗಿ ಅಂದಾಜಿಸಲಾಗಿದೆ.

ರೂ.೫೦೦ ರಿಂದ ದಂಡದ ಮೊತ್ತ ಪ್ರಾರಂಭ

ಸರಕಾರದ ಸಾರಿಗೆ ಇಲಾಖೆ ಆದೇಶದ ಪ್ರಕಾರ, ಸರಕಾರ ನೀಡಿರುವ ಅವಧಿ ಮೀರಿದರೂ ಹೆಚ್.ಎಸ್.ಆರ್.ಪಿ ಅಳವಡಿಕೆಯಾಗದಿದ್ದರೆ, ವಾಹನ ಮಾಲೀಕರು ರೂ.೫೦೦ ರಿಂದ ಪ್ರಾರಂಭವಾಗಿ ಪನರಾವರ್ತಿತವಾಗಿ ಕಾನೂನು ಉಲ್ಲಂಘನೆಯಾದಲ್ಲಿ ರೂ.೧,೦೦೦ ದವರೆಗೂ ಪ್ರತಿ ಬಾರಿ ದಂಡ ಪಾವತಿಸಬೇಕಾಗುತ್ತದೆ.

ಹೆಚ್.ಎಸ್.ಆರ್.ಪಿ ಅಡಿ ನೋಂದಣಿಯಾಗಿವೆ. ಇವಿಷ್ಟು ವಾಹನಗಳು ೨೦೧೯ರ ಏಪ್ರಿಲ್ ೧ ರ ಹಿಂದೆ ನೋಂದಣಿಯಾಗಿದ್ದರಿAದ, ನೂತನವಾಗಿ ಹೆಚ್.ಎಸ್.ಆರ್.ಪಿ ಅಡಿ ಪುನರ್ ನೋಂದಣಿ ಆಗಿವೆ. ಇನ್ನೂ ಶೇ.೫೦ ರಷ್ಟು ಹಳೆ ವಾಹನಗಳು (೨೦೧೯ರ ಏಪ್ರಿಲ್ ೧ ರ ಹಿಂದೆ ನೋಂದಣಿಯಾದ) ಮಡಿಕೇರಿ ಪ್ರಾದೇಶಿಕ ಕಚೇರಿಯಲ್ಲಿ ನೋಂದಣಿಗೆ ಬಾಕಿ ಇರುವುದಾಗಿ ಅಂದಾಜಿಸಲಾಗಿದೆ.

ರೂ.೫೦೦ ರಿಂದ ದಂಡದ ಮೊತ್ತ ಪ್ರಾರಂಭ

ಸರಕಾರದ ಸಾರಿಗೆ ಇಲಾಖೆ ಆದೇಶದ ಪ್ರಕಾರ, ಸರಕಾರ ನೀಡಿರುವ ಅವಧಿ ಮೀರಿದರೂ ಹೆಚ್.ಎಸ್.ಆರ್.ಪಿ ಅಳವಡಿಕೆಯಾಗದಿದ್ದರೆ, ವಾಹನ ಮಾಲೀಕರು ರೂ.೫೦೦ ರಿಂದ ಪ್ರಾರಂಭವಾಗಿ ಪನರಾವರ್ತಿತವಾಗಿ ಕಾನೂನು ಉಲ್ಲಂಘನೆಯಾದಲ್ಲಿ ರೂ.೧,೦೦೦ ದವರೆಗೂ ಪ್ರತಿ ಬಾರಿ ದಂಡ ಪಾವತಿಸಬೇಕಾಗುತ್ತದೆ.