ಶನಿವಾರಸಂತೆ, ಸೆ. ೧೨: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಗುAದ ಗ್ರಾಮದಲ್ಲಿ ಮಾಲಂಬಿ ಬೆಟ್ಟದಿಂದ ಹರಿದು ಬರುವ ನೀರಿಗೆ ಅಡ್ಡಲಾಗಿ ಟ್ಯಾಂಕ್ ನಿರ್ಮಿಸಿ ಗ್ರಾಮಸ್ಥರಿಗೆ ಉಪಯೋಗವಾಗುವ ಹಾಗೆ ಸರ್ಕಾರದ ವತಿಯಿಂದ ಮಾಡಲಾಗಿದೆ.

ಆದರೆ, ಈ ವರ್ಷ ಟ್ಯಾಂಕ್ ಒಳಗಡೆ ಸಂಪೂರ್ಣವಾಗಿ ಹೂಳು ತುಂಬಿಕೊAಡಿದ್ದು ನೀರು ಉಪಯೋಗಿಸುವಂತಿಲ್ಲ. ನಲ್ಲಿಗಳು ಹಾಳಾಗಿಹೋಗಿವೆ. ಶೀಘ್ರ ಟ್ಯಾಂಕನ್ನು ಸ್ವಚ್ಛಗೊಳಿಸಿ, ದುರಸ್ತಿಪಡಿಸಬೇಕು ಎಂದು ಕರವೇ ತಾಲೂಕು ಘಟಕದ ಕಾರ್ಯಕರ್ತರು ಗೌಡಳ್ಳಿ ಗ್ರಾ.ಪಂ. ಆಡಳಿತ ಮಂಡಳಿಯನ್ನು ಆಗ್ರಹಿಸಿದ್ದಾರೆ. ಟ್ಯಾಂಕ್ ನೀರನ್ನು ಗ್ರಾಮಸ್ಥರು ಕುಡಿಯಲು, ಸ್ನಾನ ಮತ್ತು ಬಟ್ಟೆ ಒಗೆಯಲು ಬಳಸುತ್ತಾರೆ. ದನಕರುಗಳು, ಪ್ರಾಣಿ-ಪಕ್ಷಿಗಳು ನೀರು ಕುಡಿಯಲು ಬರುತ್ತವೆ.

ಆದರೆ, ಈಗ ಟ್ಯಾಂಕ್ ಇರುವ ಸುತ್ತಲಿನ ಜಾಗ ಮುಳ್ಳು-ಪೊದೆ, ಗಿಡಗಂಟಿ ಬೆಳೆದು ಆವರಿಸಿ ಕೊಂಡು ಕಾಡಿನಂತಾಗಿದೆ. ಸುತ್ತಲಿನ ಕಾಡು ಕಡಿದು, ಟ್ಯಾಂಕ್ ಒಳಗಿನ ಹೂಳೆತ್ತಿಸಿ, ಸ್ವಚ್ಛಗೊಳಿಸಬೇಕು. ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಲು ಅನುವು ಮಾಡಿ ಕೊಡಬೇಕು ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಹಾಗೂ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ.