ಮಡಿಕೇರಿ, ಸೆ. ೧೨: ಮಂಡ್ಯ ಜಿಲ್ಲೆ ನಾಗಮಂಗಲದ ಮಂಡ್ಯ ಸರ್ಕಲ್ನಲ್ಲಿ ಗಣೇಶೋತ್ಸವ ಮೆರವಣಿಗೆ ಹಾಗೂ ಹಿಂದೂ ಅಂಗಡಿಗಳ ಮೇಲೆ ನಡೆಸಿರುವ ಧಾಳಿಯನ್ನು ಖಂಡಿಸಿ ಮಡಿಕೇರಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಯಿತು.
ವಿ.ಹೆಚ್.ಪಿ.ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಸುರೇಶ್ ಮೂರ್ನಾಡು, ನರಸಿಂಹ, ಪ್ರವೀಣ್ ಸಿದ್ದಾಪುರ, ಜಾಗರಣ ವೇದಿಕೆಯ ಕುಕ್ಕೆರ ಅಜಿತ್, ಚೇತನ್ ಶಾಂತಿನಿಕೇತನ, ಶಾಂತೆಯAಡ ತಿಮ್ಮಯ್ಯ, ಭಾ.ಜ.ಪಾ. ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ರಾಬಿನ್ ದೇವಯ್ಯ, ರವಿ ಮೊಗೇರ, ಮಹೇಶ್ ಜೈನಿ ಸೇರಿದಂತೆ ಭಾ.ಜ.ಪಾ.ದ ಎಲ್ಲಾ ನಗರಸಭೆ ಸದಸ್ಯರುಗಳು ಹಾಗೂ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.