ವೀರಾಜಪೇಟೆ, ಸೆ. ೧೨: ವೀರಾಜಪೇಟೆ ನೆಹರು ನಗರದ ನವಜ್ಯೋತಿ ಸಂಘ ನೆಹರು ನಗರ ವೀರಾಜಪೇಟೆ, ಸಂಘದ ಮಾಹಾಸಭೆಯು ಸಂಘದ ಸಭಾಂಗಣದಲ್ಲಿ ನಡೆಯಿತು.

ಸಂಘದ ಅದ್ಯಕ್ಷರಾದ ಬಿ.ಜೆ. ಮಣಿಕಂಠ ಅವರ ಅಧ್ಯಕ್ಷತೆಯಲ್ಲಿ ಮಹಾ ಸಭೆಯು ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಣಿಕಂಠ ಅವರು ಸಂಘವು ೩೦ ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಕ್ರೀಡೆ ಹಾಗೂ ಇನ್ನಿತರ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಸದಸ್ಯರ ಸಹಕಾರ ಮತ್ತು ಧಾನಿಗಳ ಆರ್ಥಿಕ ನೆರವಿನೊಂದಿಗೆ ಕಾರ್ಯಕ್ರಮಗಳು ಯಶಸ್ಸು ಕಾಣುತ್ತಿವೆ. ಮುಂದೆಯು ಸದಸ್ಯರು, ಸಂಘವು ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಬೇಕು ಮತ್ತು ನೂತನ ಆಡಳಿತ ಮಂಡಳಿಗೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

೨೦೨೪-೨೫ ನೇ ಸಾಲಿನ ನವಜ್ಯೋತಿ ಸಂಘದ ಆಡಳಿತ ಮಂಡಳಿ ರಚನೆಗೊಂಡು ಪ್ರಸನ್ನ ಡಿ.ಕೆ. ಅದ್ಯಕ್ಷರಾಗಿ ಪ್ರಧಾನ ಕಾರ್ಯದರ್ಶಿಯಾಗಿ ಸುನೀಶ್ ಉಪಾಧ್ಯಕ್ಷರಾಗಿ ಸುನೀಲ್, ಖಜಾಂಚಿಯಾಗಿ ಆಗಸ್ಟೀನ್ ಕ್ಸೇವಿಯರ್, ಅವಿರೋಧವಾಗಿ ಆಯ್ಕೆಗೊಂಡರು. ನಿರ್ದೇಶಕರುಗಳಾಗಿ ೧೪ ಮಂದಿ ಸದಸ್ಯರು ಅಯ್ಕೆಗೊಂಡರು.

ಸಂಘದ ಹಿರಿಯ ಸದಸ್ಯ ಜ್ಯೋಡಿ ವಾಸ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಕೆ.ಕೆ. ಪ್ರಕಾಶ್ ಅವರು ಸರ್ವರನ್ನು ವಂದಿಸಿದರು. ನವಜ್ಯೋತಿ ಸಂಘದ ಸದಸ್ಯರು ಮಾಹಾಸಭೆಯಲ್ಲಿ ಹಾಜರಿದ್ದರು.