ಸಿದ್ದಾಪುರ, ಸೆ. ೧೧: ಗೌರಿ-ಗಣೇಶ ಉತ್ಸವಕ್ಕೆ ಸರ್ವ ಧರ್ಮಿಯರು ಧನಸಹಾಯ ಸೇರಿದಂತೆ ಸಣ್ಣ ಪುಟ್ಟ ಸಹಕಾರ ನೀಡುವುದು ಸಾಮಾನ್ಯವಾಗಿದೆ. ಆದರೆ ಇಲ್ಲಿ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಕ್ರೆöÊಸ್ತ ಧರ್ಮದ ಯುವಕ ಜವಾಬ್ದಾರಿ ಹೊಂದಿದ್ದರೆ, ಸದಸ್ಯರಾಗಿ ಮುಸ್ಲಿಂ ಧರ್ಮದ ಯುವಕ ಸಾತ್ ನೀಡುವ ಮೂಲಕ ಸರ್ವ ಧರ್ಮೀಯರ ಗೌರಿ-ಗಣೇಶ ಉತ್ಸವವಾಗಿ ನೆಲ್ಯಹುದಿಕೇರಿ ಗ್ರಾಮದ ಶಾಲೆ ರಸ್ತೆಯಲ್ಲಿರುವ ಶ್ರೀ ಸಿದ್ಧಿ ವಿನಾಯಕ ಮಿತ್ರ ಮಂಡಳಿ ಖ್ಯಾತಿ ಹೊಂದಿದ್ದು ಎಲ್ಲರಿಗೂ ಮಾದರಿಯಾಗಿದೆ.
ನೆಲ್ಯಹುದಿಕೇರಿ ಗ್ರಾಮದಲ್ಲಿ ಒಟ್ಟು ಐದು ಕಡೆಗಳಲ್ಲಿ ಗೌರಿ-ಗಣೇಶ ಉತ್ಸವದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಒಂದೊAದು ಕಡೆಗಳಲ್ಲಿ ಉತ್ಸವ ಸಮಿತಿಯ ಆಡಳಿತ ಮಂಡಳಿಗಳು ಉತ್ಸವವನ್ನು ವಿಜೃಂಭಣೆಯಿAದ ಆಚರಿಸಲು ವ್ಯಾಪ್ತಿಯ ಹಿಂದೂಗಳೊAದಿಗೆ ಸಿದ್ಧತೆ ನಡೆಸುತ್ತಿದ್ದರೆ, ಇತ್ತ ಶ್ರೀ ಸಿದ್ಧಿ ವಿನಾಯಕ ಮಿತ್ರ ಮಂಡಳಿಯ ಗೌರಿ-ಗಣೇಶೋತ್ಸವವು ಕ್ರೆöÊಸ್ತ, ಮುಸ್ಲಿಂ ಹಾಗೂ ಹಿಂದೂ ಯುವಕರು ಸೇರಿ ಸೌಹಾರ್ದತೆಯಿಂದ ಆಚರಿಸುತ್ತಿರುವುದು ವಿಶೇಷವಾಗಿದೆ.
ನಾನು ಕಳೆದ ಹನ್ನೆರಡು ವರ್ಷಗಳಿಂದ ಶ್ರೀ ಸಿದ್ಧಿ ವಿನಾಯಕ ಮಿತ್ರ ಮಂಡಳಿಯ ಸಮಿತಿಯಲ್ಲಿ ಸದಸ್ಯನಾಗಿದ್ದೇನೆ. ನಮ್ಮ ಊರಿನಲ್ಲಿ ಗೌರಿ-ಗಣೇಶ ಉತ್ಸವವನ್ನು ಎಲ್ಲಾ ಧರ್ಮದವರು ಸೇರಿ ಮಾಡುತ್ತೇವೆ. ನಮ್ಮ ಮನೆಯಲ್ಲಿ ಉತ್ಸವಕ್ಕೆ ಅನ್ನದಾನದ ವ್ಯವಸ್ಥೆಯನ್ನು ಹನ್ನೆರಡು ವರ್ಷಗಳಿಂದ ಮಾಡುತ್ತಿದ್ದೇವೆ. ಕಳೆದ ಎರಡು ವರ್ಷಗಳಿಂದ ಶ್ರೀ ಸಿದ್ಧಿ ವಿನಾಯಕ ಮಿತ್ರ ಮಂಡಳಿಯ ಅಧ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ದೇವಸ್ಥಾನಕ್ಕೆ ಜಾಗದ ಕೊರತೆ ಇರುವುದೊಂದೇ ನಮ್ಮ ಕೊರಗು. ಆದಷ್ಟು ಬೇಗ ಗೌರಿ-ಗಣೇಶ ಉತ್ಸವಕ್ಕೆ ಶಾಶ್ವತ ಜಾಗ ಸಿಗಲು ಊರಿನ ಎಲ್ಲರೂ ಪ್ರಯತ್ನಿಸಬೇಕು.
ಕ್ಸೇವಿಯರ್, ಅಧ್ಯಕ್ಷರು, ಶ್ರೀ ಸಿದ್ಧಿ ವಿನಾಯಕ ಮಿತ್ರ ಮಂಡಳಿ
ಕಳೆದ ಹಲವಾರು ವರ್ಷಗಳಿಂದ ಗೌರಿ-ಗಣೇಶ ಉತ್ಸವದಲ್ಲಿ ಪಾಲ್ಗೊಂಡು ನನ್ನಿಂದಾಗುವ ಸಹಾಯ ಮಾಡಿದ್ದೇನೆ. ಇಲ್ಲಿನ ಯುವಕರು ಎಲ್ಲರೂ ಒಗ್ಗಟ್ಟಾಗಿ ಉತ್ಸವದಲ್ಲಿ ಪಾಲ್ಗೊಳ್ಳುತ್ತೇವೆ. ದೇವರ ಪೂಜೆ ನಡೆಸುವಾಗಲೂ ಬೇಧ-ಭಾವ ತೋರದೇ ನಡೆಸಿಕೊಳ್ಳುವುದು ಇಲ್ಲಿನ ವಿಶೇಷತೆಗಳಲ್ಲಿ ಒಂದಾಗಿದೆ. ದೇವರು ಒಬ್ಬನೇ ನಾಮ ಹಲವು ಎಂಬುದು ನನ್ನ ನಂಬಿಕೆ.
ನೌಫಲ್, ಸದಸ್ಯ ಶ್ರೀ ಸಿದ್ಧಿ ವಿನಾಯಕ ಮಿತ್ರ ಮಂಡಳಿ.