ಸೋಮವಾರಪೇಟೆ, ಸೆ. ೧೧: ಸಿ. ಮತ್ತು ಡಿ. ಜಾಗದ ಸಮಸ್ಯೆಗೆ ಸಂಬAಧಿಸಿದAತೆ ತಾನೂ ಸಹ ಸಂಸದನಾಗಿ ಜನತೆಯ ಪರ ನಿಲ್ಲುತ್ತೇನೆ ಎಂದು ಕೊಡಗು-ಮೈಸೂರು ಲೋಕಸಭಾ ಸಂಸದ ಯದುವೀರ್ ಒಡೆಯರ್ ಭರವಸೆ ನೀಡಿದರು.

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗಾಗಿ ಪ.ಪಂ.ಗೆ ಆಗಮಿಸಿದ ಸಂಸದರನ್ನು ಪಟ್ಟಣ ಪಂಚಾಯಿತಿ ಅಧಿಕಾರಿ ವರ್ಗ ಸ್ವಾಗತಿಸಿದ ನಂತರ, ಸಿ ಮತ್ತು ಡಿ ಜಾಗ ಸಮಸ್ಯೆ ಬಗ್ಗೆ ಮಾಧ್ಯಮದವರು ಗಮನ ಸೆಳೆದ ಸಂದರ್ಭ ತಮ್ಮ ನಿಲುವು ಸ್ಪಷ್ಟಪಡಿಸಿದರು.

ಸಿ ಮತ್ತು ಡಿ ಜಾಗ ಒತ್ತುವರಿಯಿಂದಾಗಿ ಇದೀಗ ಸಮಸ್ಯೆ ಎದುರಾಗಿದೆ. ಒತ್ತುವರಿದಾರರನ್ನು ಒಕ್ಕಲೆಬ್ಬಿಸುವಂತಹ ಆದೇಶಗಳನ್ನು ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಹೊರಡಿಸುತ್ತಿದ್ದಾರೆ. ಅನೇಕ ದಶಕಗಳಿಂದ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಈ ಭಾಗದ ರೈತರಿಗೆ ಅಭದ್ರತೆ ಕಾಡುತ್ತಿದೆ ಎಂದು ಸಂಸದರ ಗಮನ ಸೆಳೆಯಲಾಯಿತು.

ಈ ಸಂದರ್ಭ ಮಾತನಾಡಿದ ಅವರು, ಪ್ರಾಥಮಿಕವಾಗಿ ಜಂಟಿ ಸರ್ವೆ ಆಗಬೇಕಿದೆ. ಕಂದಾಯ ಹಾಗೂ ಅರಣ್ಯ ಇಲಾಖೆಯ ಮೂಲಕ ಜಂಟಿ ಸರ್ವೆ ಮಾಡಿ ವಾಸ್ತವಾಂಶದ ವರದಿ ತಯಾರಿಸಬೇಕಿದೆ. ಸಿ ಮತ್ತು ಡಿ ಜಾಗ ಎಲ್ಲಿ ಬರುತ್ತಿದೆ ಎಂಬುದನ್ನು ಅಧಿಕೃತವಾಗಿ ಮೊದಲು ಗುರುತಿಸಬೇಕು. ಈಗಿನ ಪರಿಸ್ಥಿತಿ ಏನಿದೆ ಎಂದು ಅರಿಯಬೇಕು. ಜಂಟಿ ಸರ್ವೆಗೆ ಸಂಬAಧಿಸಿದ ಸಚಿವರ ಗಮನಕ್ಕೆ ತರಲಾಗುವುದು ಎಂದರು.

ತಾನು ಸಂಸದನಾಗಿ ಈ ಬಗ್ಗೆ ಜನರ ಪರವಾಗಿ ನಿಲ್ಲುತ್ತೇನೆ. ಜನರ ಬೇಡಿಕೆಗಳನ್ನು ಸಂಬAಧಿಸಿದ ಸಚಿವರ ಎದುರು ಮಂಡಿಸುತ್ತೇವೆ. ನಮ್ಮ ಪಕ್ಷದ ನಿರ್ಧಾರವೂ ಇದೇ ಆಗಿದೆ. ಸ್ಥಳೀಯ ನಾಯಕರು ಈ ಬಗ್ಗೆ ಚರ್ಚೆ ನಡೆಸಿದ್ದು, ಸಿ ಮತ್ತು ಡಿ ಜಾಗದಲ್ಲಿ ಕೃಷಿ ಮಾಡಿಕೊಂಡಿರುವ ರೈತರ ಪರವಾಗಿ ಎಲ್ಲಾ ರೀತಿಯಲ್ಲೂ ನಿಂತು ಸಹಕಾರ ಕೊಡಲಾಗುವುದು ಎಂದು ಭರವಸೆ ನೀಡಿದರು.

ಚುನಾವಣೆಯ ನಂತರ ಇದೇ ಪ್ರಥಮ ಬಾರಿಗೆ ಆಗಮಿಸಿದ ಸಂಸದರನ್ನು ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯಾಧಿಕಾರಿ ಜಾಸಿಂ ಖಾನ್, ಸಿಬ್ಬಂದಿ ಜೀವನ್, ರೂಪಾ ಸೇರಿದಂತೆ ಇತರರು ಸ್ವಾಗತಿಸಿದರು.