ಸೋಮವಾರಪೇಟೆ,ಸೆ.೧೧: ಇಲ್ಲಿನ ಜಲಾಲಿಯಾ ಮಸ್ಜಿದ್, ಜಲಾಲಿಯಾ ಮಿಲಾದ್ ಕಮಿಟಿ ಮತ್ತು ಜಿಲ್ಲಾ ರಕ್ತ ನಿಧಿ ಘಟಕದ ವತಿಯಿಂದ ತಾ. ೧೨ರಂದು (ಇಂದು) ಬೆಳಿಗ್ಗೆ ೧೦.೩೦ ಗಂಟೆಗೆ ಜಲಾಲಿಯಾ ಮಸೀದಿ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ಮಿಲಾದ್ ಕಮಿಟಿ ಅಧ್ಯಕ್ಷ ಕರೀಂ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಜಲಾಲಿಯಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಎಂ.ಬಿ. ಇಬ್ರಾಹಿಂ, ರಕ್ತನಿಧಿ ಘಟಕದ ಅಧಿಕಾರಿ ಡಾ. ಕರುಂಬಯ್ಯ ಅವರುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.