ವೀರಾಜಪೇಟೆ, ಸೆ. ೯: ಸಂತ ಅನ್ನಮ್ಮ ಚರ್ಚ್ನಲ್ಲಿ ಮೇರಿ ಮಾತೆಯ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಬೆಳಿಗ್ಗೆ ದಿವ್ಯ ಪ್ರಾರ್ಥನೆ ಹಾಗೂ ಧರ್ಮಗುರುಗಳಿಂದ ಪ್ರವಚನವು ನಡೆಯಿತು. ಧರ್ಮಗುರುಗಳು ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು.

ವಿಶೇಷ ಪ್ರಾರ್ಥನೆಯ ಬಳಿಕ ಧರ್ಮಗುರುಗಳ ಸಮ್ಮುಖದಲ್ಲಿ ಭಕ್ತರು ಚರ್ಚ್ ಅವರಣದಲ್ಲಿರುವ ಮೇರಿ ಮಾತೆಯ ಮೂರ್ತಿಗೆ ಪುಷ್ಪಾರ್ಚನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿಯವರು, ಕನ್ಯಾ ಸ್ತಿçÃಯರು, ಭಕ್ತಾದಿಗಳು ಉಪಸ್ಥಿತರಿದ್ದರು. ಹಬ್ಬದ ಪ್ರಯುಕ್ತ ನೆರೆದಿದ್ದ ಭಕ್ತರಿಗೆ ಅನ್ನದಾನ ನಡೆಯಿತು.