ಸಂಪಾಜೆ, ಸೆ. ೯: ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಕೊಡಗು ಜಿಲ್ಲಾ ಯುವ ಒಕ್ಕೂಟ, ಸಂಪಾಜೆ ಪಯಸ್ವಿನಿ ಯುವಕ ಸಂಘ ಸಂಯುಕ್ತ ಆಶ್ರಯದಲ್ಲಿ ಪ್ರಥಮ ವರ್ಷದ ಕೆಸರು ಗದ್ದೆ ಗ್ರಾಮೀಣ ಕ್ರೀಡಾಕೂಟವು ಶ್ರೀ ಪಂಚಲಿAಗೆಶ್ವರ ದೇವಸ್ಥಾನ ಆವರಣ ಕೀಲಾರು ಗದ್ದೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಯಸ್ವಿನಿ ಯುವಕ ಸಂಘದ ಅಧ್ಯಕ್ಷ ತೀರ್ಥ ಪ್ರಸಾದ್ ದುಗ್ಗಳ ವಹಿಸಿದ್ದರು. ಉದ್ಘಾಟನೆಯನ್ನು ಪ್ರಧಾನ ಅರ್ಚಕ ನಾರಾಯಣ ಭಟ್ ನೆರವೇರಿಸಿದರು.
ವೇದಿಕೆಯಲ್ಲಿ ಲೋಕನಾಯಕ್ ಪ್ರಾಂಶುಪಾಲರು ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಪಾಜೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ, ಜಯಕುಮಾರ್ ಚೆದ್ಕಾರ್, ನವೀನ್ ಕೊಯನಾಡು ಇವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಯಸ್ವಿನಿ ಯುವಕ ಸಂಘದ ಮಾಜಿ ಅಧ್ಯಕ್ಷರಾದ ಬಿಪಿನ್ ದೇವಜನ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಸಂಘದ ಅಧ್ಯಕ್ಷರಾದ ತೀರ್ಥ ಪ್ರಸಾದ್ ದುಗ್ಗಳ ಇವರು ನಡೆಸಿಕೊಟ್ಟರು. ನಂತರ ಕೇಸರುಗದ್ದೆ ಗ್ರಾಮೀಣ ಕ್ರೀಡಾಕೂಟ ನಡೆದು ಊರ, ಪರವೂರ ಕ್ರೀಡಾಭಿಮಾನಿಗಳು ಪಾಲ್ಗೊಂಡರು, ಪುರುಷರ ಗ್ರಾಮ ಮಟ್ಟದ ಹಗ್ಗಜಗ್ಗಾಟ ದಲ್ಲಿ ಪ್ರಥಮ ಆದರ್ಶ್ ಫ್ರೆಂಡ್ಸ್ ಚೆಡಾವು, ದ್ವಿತೀಯ ಶ್ರೀ ಮಹಾವಿಷ್ಣು ಮಿತ್ರ ಬಳಗ ಪಡೆದುಕೊಂಡರೆ ಮುಕ್ತ ೫೧೦ ಕೆಜಿ ವಿಭಾಗ ದ ಹಗ್ಗಜಗ್ಗಾಟದಲ್ಲಿ ಪ್ರಥಮ ಶ್ರೀ ವಿಷ್ಣು ಅಡ್ಕ ದ್ವಿತೀಯ ಶ್ರೀ ವಿಷ್ಣು ಸಂಪ್ಯಾ ತೃತೀಯ ಅಡೂರು ಫ್ರೆಂಡ್ಸ್, ಚತುರ್ಥ ಶ್ರೀ ವಿಷ್ಣು ಬಳಗ ಸಂಪಾಜೆ ಪಡೆದುಕೊಂಡಿತು, ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಥಮ ಆದರ್ಶ ಫ್ರೆಂಡ್ಸ್ ಚೆಡವು, ದ್ವಿತೀಯ ಪಯಸ್ವಿನಿ ಪಡೆದುಕೊಂಡಿತು. ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಆದರ್ಶ್ ಫ್ರೆಂಡ್ಸ್ ಪಡೆದರೆ ತೃತೀಯ ಹಾಗೂ ಚತುರ್ಥ ಸ್ಥಾನ ಪಯಸ್ವಿನಿ ಸಂಪಾಜೆ ಪಡೆಯಿತು. ಕಾರ್ಯಕ್ರಮದ ವೀಕ್ಷಕ ವಿವರಣೆಗಾರರಾಗಿ ವಸಂತ ಅಡೂರು ಹಾಗೂ ಪ್ರಕಾಶ್ ಪಾಟಾಳಿ ಸುಂದರ ಸಂಪಾಜೆ, ವಿಕ್ರಂತ್ ಮಾಸ್ತರ್ ನೆರವೇರಿಸಿದರು.