ಮಡಿಕೇರಿ, ಸೆ. ೯ : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಡಿ ೨೧ ನೇ ಜಾನುವಾರು ಗಣತಿಯು ತಾ. ೧ ರಿಂದ ಡಿಸೆಂಬರ್ ೩೧ ರ ಅವಧಿಯಲ್ಲಿ ನಡೆಯ ಬೇಕಾಗಿದ್ದು, ಹಲವು ರಾಜ್ಯಗಳಲ್ಲಿ ಪೂರ್ವಸಿದ್ಧತಾ ಕಾರ್ಯಗಳು ಇನ್ನೂ ಮುಗಿಯದೇ ಇರುವ ಕಾರಣ ಹಾಗೂ ೨೧ ನೇ ಜಾನುವಾರು ಗಣತಿಗೆ ಅಭಿವೃದ್ಧಿಪಡಿಸಿರುವ ಸಾಫ್ಟ್ವೇರ್‌ನಲ್ಲಿ ಅಳವಡಿಸುವುದು ತಡವಾಗುತ್ತಿರುವ ಕಾರಣ ಕಾರ್ಯಕ್ರಮದ ಪ್ರಾರಂಭದ ದಿನಾಂಕವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.