ಮಡಿಕೇರಿ, ಸೆÀ. ೯ : ವನ್ಯಜೀವಿ ವಿಭಾಗಕ್ಕೆ ಸೇರಿದ ಅರಣ್ಯದಲ್ಲಿ ಪ್ರಾಣಿಗಳ ಕಳ್ಳಬೇಟೆಯಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲೆಯ ಕರಿಕೆಯ ವ್ಯಕ್ತಿಯೋರ್ವರ ಮೇಲೆ ನೆರೆಯ ಕೇರಳ ರಾಜ್ಯದಲ್ಲಿ ಪ್ರಕರಣ ದಾಖಲಾಗಿದೆ. ಬೇಟೆಯಾಡಲು ಬಳಕೆ ಮಾಡಿದ ನಕಲಿ ಬಂದೂಕು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಲಾಗುತ್ತಿದೆ.
ಕರಿಕೆ ಗ್ರಾಮದ ಎಳ್ಳುಕೊಚ್ಚಿ ನಿವಾಸಿ ಕುಡಿಯಂಗಲ್ ಬೆನ್ನಿ ಎಂಬಾತನ ಮೇಲೆ ಕಳ್ಳಬೇಟೆ ಪ್ರಕರಣಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖಾಧಿಕಾರಿಗಳು ನೀಡಿದ ದೂರಿನನ್ವಯ ಕೇರಳದ ರಾಜಪುರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಕಾಞಂಗಾಡ್ ವಲಯಕ್ಕೆ ಸೇರಿದ ಅರಣ್ಯ ಪ್ರದೇಶದಲ್ಲಿ ಈಚೆಗೆ ವನ್ಯ ಪ್ರಾಣಿ ಬೇಟೆಯಾಡಿದ ಪ್ರಕರಣದಲ್ಲಿ ಆರೋಪಿಯನ್ನಾಗಿ ಬೆನ್ನಿ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿದ್ದ ಬೆನ್ನಿ ನಿರೀಕ್ಷಣಾ ಜಾಮೀನು ಪಡೆದುಕೊಂಡು ವಿಚಾರಣೆ ಎದುರಿಸುತ್ತಿದ್ದಾನೆ.
ನಕಲಿ ಬಂದೂಕು ಬಳಕೆ..!
ಅರಣ್ಯದಲ್ಲಿ ಬೇಟೆಯಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ದೊರೆತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳಿಗೆ ಬೇಟೆಗೆ ಬಳಸಲಾಗಿದ್ದ ಬಂದೂಕು ಸಿಕ್ಕಿದೆ. ಪರಿಶೀಲನೆ ಮಾಡಿದಾಗ ಅದು ನಕಲಿ ಎಂಬದು ಖಾತರಿಯಾಗಿದೆ. ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಯಾವದೇ ಪ್ರಾಣಿಗಳ ಮಾಂಸ, ಇತ್ಯಾದಿ ಲಭ್ಯವಾಗಿಲ್ಲವೆಂದು ತಿಳಿದು ಬಂದಿದೆ.
ಇದೇ ವಿಚಾರಕ್ಕೆ ಸಂಬAಧಿಸಿದAತೆ ಬೆನ್ನಿಯ ಕಾರು ಚಾಲಕ ಸುರೇಶ್ ಎಂಬಾತನನ್ನು ಕೂಡ ವಿಚಾರಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಕೊಡಗು ಜಿಲ್ಲೆಯ ಹಲವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.
ಹಿಂದೊಮ್ಮೆ ಸಿಕ್ಕಿದ್ದ..!
ಹಿಂದೊಮ್ಮೆ ಕಳ್ಳಬೇಟೆ ಪ್ರಕರಣದಲ್ಲಿ ಬೆನ್ನಿ ಹೆಸರು ಕೇಳಿ ಬಂದಿತ್ತು. ಕರಿಕೆ ಅರಣ್ಯ ವ್ಯಾಪ್ತಿಯ ಕುಡಿಯಂಗಲ್ ಕಾಲೋನಿಗೆ ತೆರಳುವ ಕಾಲುದಾರಿಯಲ್ಲಿ ಬೇಟೆಯಾಡಲು ಬಂದೂಕನ್ನು ಮರಕ್ಕೆ ಕಟ್ಟಿದ್ದ. ಆದರೆ, ಇದೇ ದಾರಿಯಲ್ಲಿ ಸಾಗುತ್ತಿದ್ದ ಯುವಕನ ಕಾಲಿಗೆ ಗುಂಡು ಸಿಡಿದು ಗಾಯವಾಗಿತ್ತು. ಈ ಪ್ರಕರಣದಲ್ಲಿ ಬೆನ್ನಿ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಅಲ್ಲದೆ ಈ ಕಳ್ಳ ಬೇಟೆಗೆ ನಕಲಿ ಬಂದೂಕನ್ನು ಬಳಕೆ ಮಾಡಲಾಗಿತ್ತು. ಈತನ ಮೇಲೆ ಕರ್ನಾಟಕ ಹಾಗೂ ಕೇರಳದ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಹಲವಷ್ಟು ಪ್ರಕರಣಗಳು ದಾಖಲಾಗಿರುವದಾಗಿ ತಿಳಿದು ಬಂದಿದೆ. ಭಾಗಮಂಡಲ ಹಾಗೂ ಕೇರಳ ಪೊಲೀಸರ ಜಂಟಿ ತನಿಖೆಯಿಂದ ಮತ್ತಷ್ಟು ನಕಲಿ ಬಂದೂಕುಗಳು ಹೊರಬರುವ ಸಾಧ್ಯತೆಗಳಿವೆ..!
? ಸಂತೋಷ್