ಮಡಿಕೇರಿ, ಸೆ. ೯: ಲಿಟಲ್ ವುಡ್ ಮೊಂಟೆಸರಿ ಶಾಲೆ ಸಿದ್ದಾಪುರ ಮತ್ತು ಬಿಟ್ಟಂಗಾಲ ವತಿಯಿಂದ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಸಿದ್ದಾಪುರ ತ್ಯಾಗತ್ತೂರು ಬಳಿಯ ಕೊಂಗೆರ ವಿಜಯ್ ಅವರ "ಫ್ಯಾನ್ಸಿ ಲ್ಯಾಂಡ್ ಎಸ್ಟೇಟ್‌ನಲ್ಲಿ ನಡೆಯಿತು, "ಸುಮಾರು ಇಪ್ಪತೈದು ಪುಟ್ಟ ಪುಟ್ಟ ಮಕ್ಕಳು ಗದ್ದೆಯಲ್ಲಿ ನಡೆಸಿದ ಗದ್ದೆನಾಟಿ, ಓಟದ ಸ್ಪರ್ಧೆ, ಪರಸ್ಪರ ಕೆಸರೆರೆಚಾಟ, ತೋಟದ ಆವರಣದಲ್ಲಿ ಇರುವ ವಿದ್ಯುತ್ ತಂತಿ ಬೇಲಿಯ ಮಹತ್ವದ ಬಗ್ಗೆ ಶಿಕ್ಷಕರು ಮಾಹಿತಿ ನೀಡುವ ಮೂಲಕ ಉತ್ತಮ ಕಾರ್ಯಕ್ರಮ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯಸ್ಥರಾದ ಸುದಾ ಉತ್ತಪ್ಪ ವಿದ್ಯೆಯ ಜೊತೆಯಲ್ಲಿ ಕೊಡಗಿನ ಪ್ರಕೃತಿ ಸೌಂದರ್ಯದ ಬಗ್ಗೆ ಅಲ್ಲದೆ ಇಲ್ಲಿನ ಪರಿಸರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕರಾದ ಮಲ್ಲಿಕಾ, ಜೋತ್ಸö್ನ, ಸೌಮ್ಯ, ಚಿನ್ನು, ದೀಪಿಕಾ ಸೇರಿದಂತೆ ಶಾಲಾ ಸಿಬ್ಬಂದಿಗಳು ಭಾಗವಹಿಸಿದ್ದರು.