ಕಡಂಗ, ಸೆ. ೮ : ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯ ಸಭಾಂಗಣದಲ್ಲಿ ಕುಶಾಲನಗರ ರೋಟರಿ ಕ್ಲಬ್ ವತಿಯಿಂದ ಆಕ್ಟ್ ಕ್ಲಬ್ ಉದ್ಘಾಟನೆಯಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ವ್ಯವಸ್ಥಾಪಕ ಎಂ.ಬಿ. ಮೊಣ್ಣಪ್ಪ ಅವರು ವಹಿಸಿದ್ದರು.
ರೋಟರಿ ಕ್ಲಬ್ನ ಅಧ್ಯಕ್ಷ ಹರೀಶ್ ರವರು ಇಂಟರ್ ಆಕ್ಟ್ ಕ್ಲಬ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ರೋಟರಿ ಕ್ಲಬ್ನ ಸದಸ್ಯರಾದ ಮಹೇಶ್ ನಲ್ವಾಡೆ ಹಾಗೂ ಸುನಿತಾ ವಿದ್ಯಾರ್ಥಿಗಳಿಗೆ ಹಿತವಚನಗಳನ್ನು ನೀಡಿದರು ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂಗಳನ್ನು ಮಹೇಶ್ ನಲ್ವಾಡೆ ಅವರು ನೀಡಿದರು. ರೋಟರಿ ಕ್ಲಬ್ ವತಿಯಿಂದ ೨೦ ವಿದ್ಯಾರ್ಥಿಗಳಿಗೆ ಸರ್ಕಾರಿ ಶುಲ್ಕವನ್ನು ನೀಡಿ ಸಹಕರಿಸಿದರು. ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಬಿ.ಪಿ. ಅಪ್ಪಣ್ಣ, ಬಿ.ವಿ. ಅರುಣ್ ಕುಮಾರ್, P.ಟಿ. ಗಿರೀಶ್, ಮಂಜುನಾಥ್ ಕೆ.ಎನ್. ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಇಂಟರ್ ಆಕ್ಟ್ ಕ್ಲಬ್ನ ಅಧ್ಯಕ್ಷರಾಗಿ ಮಹಾಲಕ್ಷಿö್ಮ ಹಾಗೂ ಕಾರ್ಯದರ್ಶಿಯಾಗಿ ಈಶ್ವರಿ ಆಯ್ಕೆಯಾಗಿ ಪದಗ್ರಹಣ ಮಾಡಿದರು. ಮುಖ್ಯೋಪಾಧ್ಯಾಯಿನಿ ಎನ್. ಪುಷ್ಪಾ ಸ್ವಾಗತಿಸಿದರು. ವೃತ್ತಿ ಶಿಕ್ಷಕ ಎ.ಪಿ. ಸೋಮಯ್ಯ ನಿರೂಪಿಸಿದರು. ಈಶ್ವರಿ ವಂದಿಸಿದರು.