ಗೋಣಿಕೊಪ್ಪಲು, ಸೆ. ೮: ರಾಜ್ಯವು ಕರ್ನಾಟಕವೆಂದು ನಾಮಕರಣಗೊಂಡು ೫ ದಶಕಗಳು ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡ ಸುವರ್ಣ ಸಂಭ್ರಮ ರಥಯಾತ್ರೆ ಕೊಡಗು ಜಿಲ್ಲೆಗೆ ಆಗಮಿಸಿತು.
ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಮೋಹನ್ಕುಮಾರ್ ರಥವನ್ನು ಗೋಣಿಕೊಪ್ಪ ಆರ್.ಎಂ.ಸಿ. ಆವರಣದ ಮುಂಭಾಗದಲ್ಲಿ ಬರಮಾಡಿಕೊಂಡರು. ನಂತರ ನಗರದಲ್ಲಿ ಮೆರವಣಿಗೆಯಲ್ಲಿ ಸಾಗಿ ಬರುವ ಮೂಲಕ ಬಸ್ ನಿಲ್ದಾಣದಲ್ಲಿ ಸಮಾಗಮಗೊಂಡಿತು.
ಗೋಣಿಕೊಪ್ಪಲುನ ಬಸ್ ನಿಲ್ದಾಣದಲ್ಲಿ ಕಲಾವಿದರಿಂದ ಡೊಳ್ಳು ಕುಣಿತ ನಡೆಯಿತು. ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ರಥದಲ್ಲಿದ್ದ ಭುವನೇಶ್ವರಿ ದೇವಿಗೆ ಮಾಲಾರ್ಪಣೆ ನೆರವೇರಿಸಿದರು.
ವಿವಿಧ ಸಂಘ-ಸAಸ್ಥೆಗಳ ಮಹಿಳೆಯರು ರಥಕ್ಕೆ ಪುಷ್ಪಾರ್ಚನೆ ಮಾಡಿ ಅದ್ದೂರಿಯಾಗಿ ಸ್ವಾಗತ ಕೋರಿದರು. ಕನ್ನಡ ಸಾಹಿತ್ಯ ಪರಿಷತ್, ಗೋಣಿಕೊಪ್ಪ ಗ್ರಾ.ಪಂ. ಹಾಗೂ ಕನ್ನಡ ಅಭಿಮಾನಿಗಳು ಸ್ವಾಗತ ನೀಡಿದರು.
ಕರ್ನಾಟಕ ಸಂಭ್ರಮ-೫೦ ರ ಜ್ಯೋತಿ ರಥಯಾತ್ರೆಯನ್ನು ತಹಶೀಲ್ದಾರ್ ಮೋಹನ್ ಕುಮಾರ್ ಬರಮಾಡಿಕೊಳ್ಳುವ ಮೂಲಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಸಿ. ಅಪ್ಪಣ್ಣ, ಬಿಇಓ ಪ್ರಕಾಶ್, ಎಇಇ ಮಹಾದೇವ್, ಕಂದಾಯ ಇಲಾಖೆಯ ಆರ್.ಐ. ಸುಧೀಂದ್ರ, ಉಪಾಧ್ಯಕ್ಷೆ ಎಂ. ಮಂಜುಳಾ, ಗ್ರಾ.ಪಂ. ಪಿಡಿಓ ತಿಮ್ಮಯ್ಯ, ಸದಸ್ಯರಾದ ಬಿ.ಎನ್. ಪ್ರಕಾಶ್, ಅಫ್ಜಲ್, ಧನಲಕ್ಷ್ಮಿ, ಸಫೋರ ಬಾನು, ಸುಲೇಖ ಸೇರಿದಂತೆ ಹಿರಿಯ ಸಾಹಿತಿ ಪ್ರೊ. ಜೆ. ಸೋಮಣ್ಣ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ನಾಯಂದಿರ ಶಿವಾಜಿ, ಕಾವೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ, ಶಿಕ್ಷಕಿ ವಾಮನ, ಕೊಡಗು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯೆ ನೂರೇರ ಧನ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ಸಮದ್, ತಿತಿಮತಿಯ ರಜನಿ, ಸೇರಿದಂತೆ ಸ್ಥಳೀಯ ಕನ್ನಡ ಅಭಿಮಾನಿಗಳು, ಗ್ರಾ.ಪಂ. ಸಿಬ್ಬಂದಿಗಳು, ರೆವಿನ್ಯೂ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.