ನಾಪೋಕ್ಲು, ಸೆ. ೮: ಇಲ್ಲಿಗೆ ಸಮೀಪದ ಮರಂದೋಡ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಜೀಪ್ ರಸ್ತೆಯಿಂದ ಕೆಳಗೆ ಉರುಳಿ ಬಿದ್ದ ಘಟನೆ ಶುಕ್ರವಾರ ಜರುಗಿದೆ.
ಮರಂದೋಡ ಗ್ರಾಮದ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಎಂಬವರು ನನ್ನ ಜೀಪನ್ನು ಮನೆ ಸಮೀಪದಲ್ಲಿ ಚಲಾಯಿಸುತ್ತಿದ್ದ ಸಂದರ್ಭ ಅವರ ನಿಯಂತ್ರಣ ತಪ್ಪಿ ರಸ್ತೆಯ ಕೆಳಗೆ ಉರುಳಿ ಬಿದ್ದಿದೆ. ಈ ಸಂದರ್ಭ ಜೀಪ್ನಲ್ಲಿ ಹರೀಶ್ ಸಂಬAಧಿಕರೂ ಇದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಜೀಪನ್ನು ಮೇಲೆತ್ತಲಾಯಿತು.