ಗೋಣಿಕೊಪ್ಪಲು, ಆ. ೨೭: ಪೊನ್ನಂಪೇಟೆಯ ಕೊಡವ ಎಜುಕೇಷನ್ ಸೊಸೈಟಿಯ ಅಧೀನಕ್ಕೊಳಪಡುವ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಪ್ರಸಕ್ತ ವರ್ಷ ಪ್ರವೇಶಾತಿ ಪಡೆದ ಇಂಜಿನಿಯರಿAಗ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಡೆಕ್ಷನ್ ಕಾರ್ಯಕ್ರಮ ಅಂಗವಾಗಿ ಯೋಗಾಭ್ಯಾಸದ ಮಹತ್ವ ತಿಳಿಸುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರಿನ ಯೋಗವಿಲ್ಲಾ ಸಂಸ್ಥೆಯ ಸಂಸ್ಥಾಪಕಿಯಾದ ಅಮೃತ್ ರಾಕೇಶ್ ಅವರು ಪಾಲ್ಗೊಂಡಿದ್ದರು. ಪೊನ್ನಂಪೇಟೆಯ ಆರೋಗ್ಯಧಾಮ ನ್ಯಾಚುರೋಪತಿ ಮತ್ತು ಯೋಗ ಕೇಂದ್ರದಲ್ಲಿ ಚಿಕಿತ್ಸಕರಾಗಿ ಮತ್ತು ಕೂರ್ಗ್ ಸಿಗ್ನೇಚರ್ ಅಕಾಡೆಮಿಯಲ್ಲಿ ಯೋಗ ತರಬೇತುದಾರರು ಹಾಗೂ ಲಯನ್ಸ್ ಗ್ರೂಪ್ ಆಫ್ ಇನ್ಸಿ÷್ಟಟ್ಯೂಷನ್ ನಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಇವರು, ವಿದ್ಯಾರ್ಥಿಗಳಿಗೆ ಯೋಗಾಭ್ಯಾಸದ ಮಹತ್ವವನ್ನು ತಿಳಿಸಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಇವರು, ಯೋಗವೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಪೂರಕವಾಗಿದೆ. ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯವನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳಬಹುದು. ಯೋಗದಿಂದ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಬಹುದು ಎಂದು ತಿಳಿಸಿದರು. ಯೋಗದ ವಿವಿಧ ಆಸನಗಳು ಮತ್ತು ಅವುಗಳಿಂದ ಆಗುವ ಪ್ರಯೋಜನಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಐ.ಟಿ. ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಬಸವರಾಜು ವಹಿಸಿದ್ದರು. ಸಿ.ಐ.ಟಿ. ಕಾಲೇಜಿನ ಬೇಸಿಕ್ ಸೈನ್ಸ್ ಆಂಡ್ ಹ್ಯೂಮ್ಯಾನಿಟಿಸ್ ವಿಭಾಗದ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೈಬರ್ ಆಂಡ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿAಗ್ ವಿಭಾಗದ ತೃತೀಯ ಸೆಮಿಸ್ಟರ್ ವಿದ್ಯಾರ್ಥಿನಿ ಬೊಳ್ಳಮ್ಮ ಸ್ವಾಗತಿಸಿ, ಕಂಪ್ಯೂಟರ್ ಸೈನ್ಸ್ ವಿಭಾಗದ ತೃತೀಯ ಸೆಮಿಸ್ಟರ್ ವಿದ್ಯಾರ್ಥಿನಿ ಸೋನಲ್ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ರಸಾಯನಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕಿ ಯಮುನ ಐ.ಕೆ ಮತ್ತು ಆಂಗ್ಲ ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕಾವೇರಿ ಚಂಗಪ್ಪ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸಿ.ಐ.ಟಿ. ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿAಗ್ ವಿಭಾಗದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವೃಂದದವರು ಪಾಲ್ಗೊಂಡಿದ್ದರು.