ಮಡಿಕೇರಿ, ಆ. ೨೭: ತಾ. ೨೭ರಂದು ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಚೆರಿಯಪಂಡ ರಾಜ ನಂಜಪ್ಪ ಅವರ ಮನೆಯ ಪಕ್ಕದಲ್ಲಿ ದಿ. ದೇವಯ್ಯ ಅವರ ಕಾಫಿ ತೋಟದ ಬದಿಯಲ್ಲಿ ಹರಿಯುವ ಕೀರೆಹೊಳೆಯಲ್ಲಿ ಸುಮಾರು ೪೦-೪೫ ವರ್ಷದ ಅಪರಿಚಿತ ಹೆಂಗಸಿನ ಮೃತದೇಹವು ಹರಿಯುವ ನೀರಿನಲ್ಲಿ ಬಿದಿರಿನ ಮುಳ್ಳಿಗೆ ಸಿಕ್ಕಿಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬAಧ ಚೆರಿಯಪಂಡ ರಾಜ ನಂಜಪ್ಪರವರು ನೀಡಿದ ದೂರಿಗೆ ಪ್ರಕರಣ ದಾಖಲಿಸಲಾಗಿದ್ದು, ಅಪರಿಚಿತ ಹೆಂಗಸಿನ ಮೃತದೇಹದ ವಾರಸುದಾರರು ಪತ್ತೆಯಾಗುವವರೆಗೂ ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗುತ್ತದೆ. ಹಸಿರು ಮತ್ತು ಗುಲಾಬಿ ಬಣ್ಣದ ಸೀರೆ, ಬೂದು ಮತ್ತು ಬಿಳಿ ಬಣ್ಣದ ರವಿಕೆ, ಕಪ್ಪು ಬಣ್ಣದ ತುಂಬು ತೋಳಿನ ಶರ್ಟ್ ಧರಿಸಿದ್ದು ಕುತ್ತಿಗೆಯಲ್ಲಿ ಒಂದು ತಾಯಿತ, ಕಿವಿಯಲ್ಲಿ ಹಿತ್ತಾಳೆಯ ಓಲೆ, ಕೈಗಳಲ್ಲಿ ಹಿತ್ತಾಳೆಯ ಬಳೆ ಧರಿಸಿದ್ದು, ಒಂದು ಎಲೆ ಅಡಿಕೆ ಚೀಲ ಸಿಕ್ಕಿದೆ.

ದೂರವಾಣಿ ೦೮೨೭೨-೨೨೮೩೩೦, ೦೮೨೭೪- ೨೫೭೪೮೮, ೨೪೭೨೦೯, ೨೪೯೦೪೪ ಸಂಪರ್ಕಿಸುವAತೆ ಪೊನ್ನಂಪೇಟೆ ಠಾಣಾಧಿಕಾರಿ ಕೋರಿದ್ದಾರೆ.