ಮಡಿಕೇರಿ, ಆ. ೨೭: ಪೊನ್ನಂಪೇಟೆ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಂ ಸಭೆ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಚೇರಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ನಡೆಯಿತು. ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್ ಅವರು ಮಾತನಾಡಿ, ಗೃಹಲಕ್ಷಿö್ಮ, ಶಕ್ತಿ, ಯುವನಿಧಿ ಹಾಗೂ ಉಚಿತ ಪಡಿತರ ಯೋಜನೆಗಳು ಬಡಜನರಿಗೆ ಬಹಳ ಅನುಕೂಲಕರವಾಗಿದ್ದು, ಸಕಾಲದಲ್ಲಿ ಅಧಿಕಾರಿಗಳು ಇವುಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕಾಗಿ ಸಭೆಯಲ್ಲಿ ಹೇಳಿದರು.
ತಾಲೂಕಿನಲ್ಲಿ ಗೃಹಜ್ಯೋತಿ ಯೋಜನೆಯಲ್ಲಿ ೨೫,೭೮೦ ಫಲಾನುಭವಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದು, ಇನ್ನೂ ೧೧೬ ಮಂದಿಗೆ ಕೆಲ ತಾಂತ್ರಿಕ ಸಮಸ್ಯೆಗಳಿಂದ ಯೋಜನೆ ತಲುಪಿಲ್ಲ ಎಂದು ಸೆಸ್ಕ್ ಅಧಿಕಾರಿ ಸಭೆಗೆ ಮಾಹಿತಿ ಇತ್ತರು. ಗೃಹಲಕ್ಷಿö್ಮ ಯೋಜನೆಯಡಿಯಲ್ಲಿ ೧೭,೭೩೯ ಫಲಾನುಭವಿಗಳಿಗೆ ತಾಲೂಕಿನಲ್ಲಿ ಯೋಜನೆ ತಲುಪಿದ್ದು, ೨೮೪ ಮಂದಿಗೆ ಇ-ಕೆ.ವೈ.ಸಿ ಸಮಸ್ಯೆಯಿಂದ ಯೋಜನೆ ತಲುಪಿಲ್ಲ ಎಂಬುದಾಗಿ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಿ.ಡಿ.ಪಿ.ಓ ಮಾಹಿತಿ ಇತ್ತರು. ಅನ್ನಭಾಗ್ಯ, ಯುವನಿಧಿ ಯೋಜನೆಗಳ ಬಗ್ಗೆಯೂ ಇದೇ ಸಂದರ್ಭ ಸಂಬAಧಿಸಿದ ಇಲಾಖೆಯವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸತೀಶ್ ಕುಮಾರ್ ಸ್ವಾಗತಿಸಿ, ವೀರಾಜಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಂದಿಸಿದರು.