ಮಡಿಕೇರಿ, ಆ. ೨೭: ಕೊಣಂಜಗೇರಿ ಗ್ರಾಮ ಪಂಚಾಯಿತಿ ಬಲಮುರಿ ವಾರ್ಡ್ ಸಭೆ ತಾ.೨೮ ರಂದು (ಇಂದು) ಬಲಮುರಿ ಸಮುದಾಯ ಭವನ ಕಟ್ಟಡದಲ್ಲಿ ಪೂರ್ವಾಹ್ನ ೧೧ ಗಂಟೆಗೆ ಪಂಚಾಯಿತಿ ಸದಸ್ಯ ಬಿ.ಯು ಕಾಳಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ತಾ.೨೯ ರಂದು ಕಿರುಂದಾಡು -ಕೈಕಾಡು ವಾರ್ಡ್ ಸಭೆ ಕೈಕಾಡು ಸಜ್ಜಲಮ್ಮೆ ದೇವಸ್ಥಾನದ ಸಮುದಾಯ ಭವನ ಕಟ್ಟಡದಲ್ಲಿ ಪೂರ್ವಾಹ್ನ ೧೧ ಗಂಟೆಗೆ ಗ್ರಾಮ ಪಂಚಾಯಿತಿ ಸದಸ್ಯ ಎನ್.ಎಸ್ ಬೆಳ್ಯಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕೊಣಂಜಗೇರಿ ಗ್ರಾಮ ಸಭೆ ಪಾರಾಣೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೆ.೫ ರಂದು ಪೂರ್ವಾಹ್ನ ೧೧ ಗಂಟೆಗೆ ಪಂಚಾಯಿತಿ ಅಧ್ಯಕ್ಷ ಪಾಡೆಯಂಡ ಸಿ. ಕಿಶಾಲಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ.