ಮುಳ್ಳೂರು, ಆ. ೨೭: ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಚ್.ಬಿ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು. ವಾರ್ಷಿಕ ಮಹಾಸಭೆಯಲ್ಲಿ ಸಂಘದ ಹಿರಿಯ ಲೆಕ್ಕಾಧಿಕಾರಿ ಎಚ್.ಆರ್. ಧರಣಿ ಆಡಳಿತ ಮಂಡಳಿಯ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸುತ್ತಾ, ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೨೫೭೭ ಮಂದಿ ಸದಸ್ಯರಿದ್ದು ಸದಸ್ಯರ ಶೇರು ಹಣ ೧ ಕೋಟಿ ೬೯ ಲಕ್ಷ ರೂ. ಇರುತ್ತದೆ. ಇದರಲ್ಲಿ ಸರಕಾರದ ಶೇರು ಹಣ ೨ ಲಕ್ಷದ ೧೮ ಸಾವಿರ ರೂ. ಇರುತ್ತದೆ ಸಂಘದ ಒಟ್ಟು ದುಡಿಯುವ ಬಂಡವಾಳ ೨೦ ಕೋಟಿ ೪೬ ಲಕ್ಷ ರೂ. ಇರುತ್ತದೆ ಡಿಸಿಸಿ ಬ್ಯಾಂಕ್ ಪಾಲುಹಣ ೭೨,೫೦,೦೦೦ ರೂ ಇದ್ದು ಸಂಘದ ಕ್ಷೇಮನಿಧಿ ೭೩,೩೩,೨೭೫ ರೂ. ಸಂಘವು ೨೦೨೪ನೇ ಸಾಲಿಗೆ ೨೭, ೩೩,೧೬೮ ರೂ ನಿವ್ವಳ ಲಾಭಗಳಿಸಿದ್ದು ಸಂಘವು ಕಳೆದ ಸಾಲಿಗೆ ೧೫ ಕೋಟಿ ೬೦ ಲಕ್ಷ ರೂ. ಸಾಲ ವಿತರಿಸಿದ್ದು ಇದರಲ್ಲಿ ೧೪ ಕೋಟಿ ೮೨ ಲಕ್ಷ ರೂ. ಕೆಸಿಸಿ ಸಾಲ ವಿತರಿಸಿದ್ದು ಸಂಘವು ಡಿಸಿಸಿ ಬ್ಯಾಂಕ್ನಿAದ ೧೪ ಕೋಟಿ ೫೧ ಲಕ್ಷ ರೂ. ಪಡೆದುಕೊಂಡು ಪೂರ್ತಿ ಹಣವನ್ನು ಪಾವತಿಸಿದೆ. ಸಂಘವು ೭೭ ಲಕ್ಷ ರೂ. ಆಭರಣ ಸಾಲ ಮತ್ತು ಇತರೆ ಸಾಲವನ್ನು ವಿತರಣೆ ಮಾಡಿದೆ ಎಂದು ವರದಿ ಮಂಡಿಸಿದರು.
ಸAಘದ ಅಭಿವೃದ್ಧಿ ಕುರಿತಾಗಿ ಸಹಕಾರಿ ಪ್ರಮುಖರಾದ ಸುಬ್ಬಪ್ಪ, ಎಸ್.ಎಂ. ಉಮಾಶಂಕರ್ ಮತ್ತಿತರರು ಚರ್ಚೆ ನಡೆಸಿದರು. ಸಂಘವು ಕಳೆದ ಸಾಲಿಗಿಂತ ಈ ಸಾಲಿನಲ್ಲಿ ೩ ಲಕ್ಷ ರೂ. ಲಾಭ ಗಳಿಸಿರುವುದ್ದರಿಂದ ಸಂಘದ ಸದಸ್ಯರಿಗೆ ಶೇ.೯ ಡಿವಿಡೆಂಡ್ ನೀಡುವಂತೆ ಸಭೆಯಲ್ಲಿ ನಿರ್ಣಹಿಸಲಾಯಿತು.
ಮಹಾಸಭೆಯಲ್ಲಿ ಶನಿವಾರಸಂತೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಭರತ್ಕುಮಾರ್ ಮಾತನಾಡಿ, ಡಿಸಿಸಿ ಬ್ಯಾಂಕ್ ಸಾಲ ವ್ಯವಹಾರ ಹೊರತಾಗಿ ಇತರೆ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು ವೃತ್ತಿಪರ ಶಿಕ್ಷಣ ಮತ್ತು ಉನ್ನತ್ತ ಶಿಕ್ಷಣಕ್ಕಾಗಿ ೨ ಲಕ್ಷದಿಂದ ೬೦ ಲಕ್ಷದವರಿಗೆ ಶಿಕ್ಷಣ ಸಾಲವನ್ನು ನೀಡುತ್ತಿದ್ದು ಇದರ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಚ್.ಪಿ.ಶೇಷಾದ್ರಿ, ಸಹಕಾರಿ ಸದಸ್ಯರು ಸಂಘದಲ್ಲಿ ಮಾಡಿದ ಕೃಷಿ ಸಾಲವನ್ನು ಸಕಾಲ ಸಮಯದಲ್ಲಿ ಮರು ಪಾವತಿಸಿ ಈ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕು. ಸಂಘವು ಕೃಷಿ ಸಾಲ, ಇತರೆ ಸಾಲ, ಆಭರಣ ಸಾಲಗಳನ್ನು ನೀಡುತ್ತಿದ್ದು ಪ್ರಸ್ತಕ್ತ ಸಾಲಿನಲ್ಲಿ ಸಂಘವು ಉತ್ತಮ ಲಾಭಗಳಿಸಿದ್ದು ಈ ನಿಟ್ಟಿನಲ್ಲಿ ಸಹಕಾರಿ ಸದಸ್ಯರು ಇನ್ನು ಮುಂದೆಯೂ ಇದೆ ರೀತಿಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ತೀರ್ಥಾನಂದ್, ನಿರ್ದೇಶಕರಾದ ಎನ್.ಬಿ.ನಾಗಪ್ಪ, ಎಂ.ಎಸ್.ತAಗಮ್ಮ, ಜಿ.ಬಿ.ಲಿಂಗರಾಜು, ಡಿ.ಬಿ.ಧರ್ಮಪ್ಪ, ಎಸ್.ಆರ್. ಕಾರ್ತಿಕ್, ಜಗದೀಶ್, ಪೊನ್ನಪ್ಪ, ದೊಡ್ಡೇಗೌಡ, ಪುಟ್ಟಯ್ಯ, ಕೆಡಿಸಿಸಿ ಬ್ಯಾಂಕ್ ಪರ ನಿರ್ದೇಶಕಿ ಎಂ.ಕೆ. ಲಲಿತ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಇ.ಹೂವಣ್ಣ, ಸಂಘದ ಸಿಬ್ಬಂದಿ ಹಾಜರಿದ್ದರು. ಈ ಸಂದರ್ಭದಲ್ಲಿ ಹಿರಿಯ ಸಹಕಾರಿ ಸುಬ್ಬಪ್ಪ ಅವರನ್ನು ಸನ್ಮಾನಿಸಲಾಯಿತು.