ಶನಿವಾರಸಂತೆ, ಆ. ೨೬: ಅದೊಂದು ಶಾಲೆಯಲ್ಲಿ ಬಾಹ್ಯಾಕಾಶಯಾನಕ್ಕೆ ಸಕಲ ಸಿದ್ಧತೆಗಳು ನಡೆದಿತ್ತು. ವಿದ್ಯಾರ್ಥಿಗಳೂ ಕೂಡ ಭಯ ಮಿಶ್ರಿತ ಕೌತುಕದಿಂದಲೇ ಬಾಹ್ಯಾಕಾಶ ಯಾನಕ್ಕೆ ಒಂದೊAದೆ ಮೆಟ್ಟಿಲೇರತೊಡಗಿದರು ಅಂತರಿಕ್ಷ ಪ್ರವೇಶಿಸಿದ ವಿದ್ಯಾರ್ಥಿಗಳಿಗೆ ಆಶ್ಚರ್ಯವೇ ಕಾದಿತ್ತು. ಹೋ.. ಎಂಬ ಉದ್ಘಾರ ಅವರಿಗರಿವಿಲ್ಲದಂತೆ ಹೊರಬಿದ್ದಿತ್ತು.

ರಂಗು ರಂಗಿನ ಬಣ್ಣಗಳಿಂದ ಕಂಗೊಳಿಸುತ್ತಿದ್ದ ಸೂರ್ಯ ಚಂದ್ರ ನಕ್ಷತ್ರ ಗ್ರಹ ಉಪಗ್ರಹಗಳು ಧೂಮಕೇತುಗಳು ಉಲ್ಕೆಗಳು ಇಡೀ ಶಾಲಾ ತರಗತಿ ಕೋಣೆಯೇ ಅಂತರಿಕ್ಷದAತೆ ಕಂಗೊಳಿಸುತ್ತಿತ್ತು. ಇದೆಲ್ಲಾ ಸಾಧ್ಯವಾದದ್ದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳ್ಳೂರಿನಲ್ಲಿ ಶಾಲಾ ಶಿಕ್ಷಕರಿಗೆ ಆಸಕ್ತಿ ಇದ್ದರೆ ಏನು ಬೇಕಾದರು ಮಾಡಬಹುದು ಎಂಬುದಕ್ಕೆ ಪುಟ್ಟ ಮುಳ್ಳೂರು ಶಾಲೆ ಸ್ಪಷ್ಟ ಉದಾಹರಣೆಯಾಗಿತ್ತು.

ಚಂದ್ರಯಾನ ಮಿಷನ್ -೩ ಯಶಸ್ವಿನ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ತರಬೇತಿ ಸಂಸ್ಥೆಗಳಲ್ಲಿ ಈ ದಿನವನ್ನು ರಾಷ್ಟಿçÃಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲು ಸೂಚಿಸಲಾಗಿತ್ತು ಇದನ್ನು ಮನಗಂಡ ಮುಳ್ಳೂರು ಶಾಲೆಯ ಶಿಕ್ಷಕರು ಈ ದಿನವನ್ನು ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶದ ಕುರಿತಾಗಿ ಅರಿವು ಮತ್ತು ಆಸಕ್ತಿ ಮೂಡಿಸುವ ಸಲುವಾಗಿ ಬಳಸಿಕೊಳ್ಳಬೇಕು ಎಂದು ತೀರ್ಮಾನಿಸಿ ಮುಖ್ಯ ಶಿಕ್ಷಕ ಸತೀಶ್ ರವರ ಮಾರ್ಗದರ್ಶನದಲ್ಲಿ ಶಿಕ್ಷಕರಾದ ಜಾನ್ ಪಾವ್ಲ್ ಡಿಸೋಜಾ ಮತ್ತು ಶೀಲಾ ಕಾರ್ಯಪ್ರವೃತ್ತರಾದರು. ಸತೀಶ್ ದೊಡ್ಡ ಕಪ್ಪು ಟಾರ್ಪಲ್ ಬಳಸಿ ಕೃತಕ ಬಾಹ್ಯಾಕಾಶ ನಿರ್ಮಾಣ ಮಾಡಿದರು. ಬಣ್ಣ ಬಣ್ಣದ ಲೈಟ್‌ಗಳನ್ನು ಬಳಸಿ ಸೌರವ್ಯೂಹವನ್ನ ಆಕರ್ಷಕವಾಗಿ ನಿರ್ಮಾಣ ಮಾಡಿದರೆ, ಜಾನ್ ಪಾವ್ಲ್ ಡಿಸೋಜಾ ಅವರು ದಿನದ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದ ಕುರಿತಾದ ಚಂದ್ರಯಾನ, ಉಪಗ್ರಹಗಳ ಕಾರ್ಯವೈಖರಿ ಸೂರ್ಯ ಚಂದ್ರ ನಕ್ಷತ್ರ ಗ್ರಹಗಳ ಕುರಿತಾದ ಕೌತುಕ ವಿಷಯಗಳನ್ನು ತಿಳಿಸಿಕೊಟ್ಟರು. ಶಿಕ್ಷಕಿ ಶೀಲಾ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ರಾಕೆಟ್ ತಯಾರಿ ಚಂದ್ರಯಾನ ಕುರಿತಾದ ರಸಪ್ರಶ್ನೆ ಚಿತ್ರಕಲೆ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಕೃತಕ ರಾಕೆಟ್ ಹಾರಿಸಿ ಆನಂದಿಸಿದರು. ಇದೇ ಸಂದರ್ಭ ದಲ್ಲಿ ಎಪಿಜೆ ಅಬ್ದುಲ್ ಕಲಾಂ ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಇವರ ಅಂತರಿಕ್ಷದಲ್ಲಿಯ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಪ್ರೊಜೆಕ್ಟರ್ ಮೂಲಕ ಚಂದ್ರಯಾನ ಯಶಸ್ವಿಯಾದ ವಿಡಿಯೋ ತುಣುಕುಗಳನ್ನು ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳನ್ನು ರೋಮಾಂಚಿತಗೊಳಿಸಲಾಯಿತು.