ವೀರಾಜಪೇಟೆ, ಆ. ೨೭: ಪೂರ್ವನಿಯೋಜಿತ ಗುರಿಯನ್ನು ಇಟ್ಟುಕೊಂಡು ಶಿಕ್ಷಣದೆಡೆಗೆ ಗಮನಹರಿಸಿ ಜೀವನದಲ್ಲಿ ಎದುರಿಸುವ ಕಷ್ಟಗಳನ್ನು ಮೀರಿ ಸಾಧನೆ ಮಾಡುವಂತೆ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಅವರು ಕರೆ ನೀಡಿದರು.

ಎ.ಕೆ ಸುಬ್ಬಯ್ಯ-ಪೊನ್ನಮ್ಮ ದತ್ತಿನಿಧಿ ವತಿಯಿಂದ ಪದವಿ ಶಿಕ್ಷಣಕ್ಕಾಗಿ ಜಿಲ್ಲೆಯ ವಿದ್ಯಾರ್ಥಿನಿ ಯರಿಗೆ ನೀಡುವ ವಿದ್ಯಾರ್ಥಿವೇತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಮ್ಮ ತಂದೆ ದಿವಂಗತ ಎ.ಕೆ ಸುಬ್ಬಯ್ಯ ಅವರಿಗೆ ಹೆಣ್ಣು ಮಕ್ಕಳ ಬಗ್ಗೆ ತೀವ್ರ ಕಾಳಜಿ ಇತ್ತು. ಅವರ ಜ್ಞಾಪಕಾರ್ಥವಾಗಿ ಸಾರ್ಥಕತೆ ಸಿಗುವಂತಹ ಕಾರ್ಯವನ್ನೇನಾದರು ಮಾಡಬೇಕೆಂಬ ಉದ್ದೇಶದಿಂದ ದತ್ತಿನಿಧಿ ಸ್ಥಾಪಿಸಿ ವಿದ್ಯಾರ್ಥಿನಿಯರಿಗೆ ವೇತನವನ್ನು ರೂಪಿಸುವ ಕಾರ್ಯಕ್ರಮವನ್ನು ಕೈಗೊಳ್ಳುವ ನಿಶ್ಚಯ ೪ ವರ್ಷಗಳ ಹಿಂದೆ ಮಾಡಲಾಯಿತು. ವಿದ್ಯಾರ್ಥಿನಿಯರಿಗೆ ವೇತನ ನೀಡುವ ಪ್ರಕ್ರಿಯೆ ಪಾರದರ್ಶಕವಾಗಿರಬೇಕು, ರಾಜಕೀಯ ಒತ್ತಡದಿಂದ ಹೊರಬಂದು ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಬೇಕೆಂಬ ಆಲೋಚನೆಯಿಂದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಶಕ್ತಿ ಪತ್ರಿಕೆಯ ಸಹಕಾರ ಬಯಸಲಾಯಿತು. ಈ ಮೂಲಕ ೪ ವರ್ಷಗಳ ಕಾಲ ಪಕ್ಷಾತೀತವಾಗಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಾ ಬಂದಿದೆ. ಆರ್ಥಿಕವಾಗಿ, ದೈಹಿಕವಾಗಿ ಆರೋಗ್ಯ ಇರುವವರೆಗೂ ಈ ದತ್ತಿನಿಧಿ ಮುಂದುವರಿಯಲಿದೆ ಎಂದು ಪೊನ್ನಣ್ಣ ಅವರು ಹೇಳಿದರು. ಈಗಾಗಲೆ ೨೦೨೧ ರಿಂದ ೩ ವರ್ಷಗಳ ಕಾಲ ವೇತನ ಪಡೆದವರು ತಮ್ಮ ಪದವಿಯನ್ನು ಉತ್ತಮ ಅಂಕಗಳೊAದಿಗೆ ಪೂರೈಸಿದ್ದಾರೆ. ಹಲವಾರು ಮಂದಿ ಕೆಲಸವನ್ನು ಕೂಡ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ವೇತನ ಕಾರ್ಯಕ್ರಮ ಯಶಸ್ಸಿಗೆ ಇದು ಸಾಕ್ಷಿಯಾಗಿದೆ. ವೇತನದ ಉದ್ದೇಶ ಪ್ರತಿಭಾವಂತರನ್ನು ಗುರುತಿಸಿ ಅವರಲ್ಲಿ ಸ್ಫೂರ್ತಿ ತುಂಬಿಸುವAತದ್ದಾಗಿದ್ದು, ಇದನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳುವಂತಾಗಬೇಕೆAದರು. ವಿದ್ಯಾರ್ಥಿಗಳು ಮಾನವೀಯತೆಯನ್ನು ಬೆಳೆಸಿಕೊಂಡು ಮುಂದೆ ಇತರರಿಗೆ ಸಹಾಯ ಮಾಡುವಂತೆ ಈ ಸಂದರ್ಭ ಕರೆ ನೀಡಿದರು.

‘ಶಕ್ತಿ’ ಸಂಪಾದಕ ಜಿ.ಚಿದ್ವಿಲಾಸ್ ಅವರು ಮಾತನಾಡಿ, ಶಾಂತಿ, ನೆಮ್ಮದಿ ಇದ್ದರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ’ಶಕ್ತಿ’ ಯಾವುದೇ ರಾಜಕೀಯ ಪಕ್ಷದ ಪರ ನಿಂತಿಲ್ಲ, ನಿಲ್ಲುವುದೂ ಇಲ್ಲ. ವಿದ್ಯಾರ್ಥಿನಿ ಯರಿಗೆ ಸಹಾಯ ಮಾಡಬೇಕೆಂಬ ಪೊನ್ನಣ್ಣ ಅವರ ಸಮಾಜಮುಖಿ ಕಾರ್ಯಕ್ರಮಕ್ಕೆ

(ಮೊದಲ ಪುಟದಿಂದ) ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಧರ್ಮಾತೀತ, ಜಾತ್ಯತೀತವಾಗಿ ಆಯ್ಕೆ ಮಾಡಲಾಗಿದೆ. ವಿದ್ಯಾರ್ಥಿನಿಯರು ವಿದ್ಯಾರ್ಥಿವೇತನವನ್ನು ಸದುಪಯೋಗ ಪಡಿಸಿಕೊಳ್ಳಿ; ಸಣ್ಣ ಪುಟ್ಟ ವಿಷಯಗಳಿಗೆ ತಮ್ಮ ಜೀವವನ್ನು ತಾವು ತೆಗೆದುಕೊಳ್ಳು ವಂತಹ ನಿರ್ಧಾರವನ್ನು ಮಾಡಬೇಡಿ. ವಿದ್ಯಾರ್ಥಿವೇತನದಿಂದ ಪೋಷಕರಿಗೆ ಹೊರೆ ಕಡಿಮೆಯಾಗಿದೆ. ಉದ್ಯೋಗಾ ವಕಾಶ ಆಧುನಿಕ ಯುಗದಲ್ಲಿ ಹೆಚ್ಚಿದ್ದು, ಇದನ್ನು ಬಳಸಿಕೊಳ್ಳಿ ಎಂದರು.

ಶಾಸಕ ಪೊನ್ನಣ್ಣ ಅವರ ಸಹೋದರ ನರೇನ್ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿವೇತನವನ್ನು ವಿಸ್ತರಿಸುವ ಚಿಂತನೆ ಇದೆ. ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರವಲ್ಲದೆ ಎಲ್ಲ ವಿದ್ಯಾರ್ಥಿಗಳಿಗೂ ವೇತನ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ಮಾತನಾಡಿ, ವಿದ್ಯಾರ್ಥಿವೇತನವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

‘ಶಕ್ತಿ’ಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಜಿ.ಆರ್. ಪ್ರಜ್ವಲ್ ಅವರು ಅರ್ಜಿಗಳನ್ನು ಆಯ್ಕೆ ಮಾಡುವಾಗ ಅಳವಡಿಸಿಕೊಂಡ ಮಾನದಂಡದ ಕುರಿತು ವಿವರಿಸಿದರು.

ವಿದ್ಯಾರ್ಥಿ ವೇತನಕ್ಕೆ eviಜhಥಿಚಿ.ಛಿom (ವಿನೀತ್ ಕಾರ್ಯಪ್ಪ), ಭಟ್ಸ್ ಡೆಂಟಲ್ (ಪವನ್ ಬೋಪಣ್ಣ), ಲೀಶರ್ ಎಂಟರ್‌ಟೈನ್‌ಮೆAಟ್ (ನರೇನ್ ಬೆಳ್ಳಿಯಪ್ಪ) ಕೂಡ ಸಹಕರಿಸಿದರು.

ವೇದಿಕೆಯಲ್ಲಿ ಶಾಸಕ ಪೊನ್ನಣ್ಣ ಅವರ ಚಿಕ್ಕಮ್ಮ ಗಂಗಮ್ಮ, ಸಹೋದರ ನರೇನ್ ಅವರ ಪತ್ನಿ ಚಂದಲೆ ಅವರುಗಳು ಹಾಜರಿದ್ದರು. ಶಿಕ್ಷಕ ಮಂಜುನಾಥ್ ಅವರು ಕಾರ್ಯಕ್ರಮ ನಿರೂಪಿಸಿದರು. ಲಾಲ್‌ಕುಮಾರ್ ಪ್ರಾರ್ಥನೆ ಮಾಡಿದರು.