ಪೊನ್ನಂಪೇಟೆ, ಆ. ೨೬: ಅಪ್ಪಚ್ಚಕವಿ ವಿದ್ಯಾಲಯದ ರಜತ ವೈಭವ ಕಲಾ ಮಂದಿರದಲ್ಲಿ ಸ್ವಾತಂತ್ರö್ಯ ಹೋರಾಟಗಾರ ಕಾಕಮಾಡ ನಾಣಯ್ಯ ಅವರ ಜ್ಞಾಪಕಾರ್ಥ ನಡೆದ ಪೊನ್ನಂಪೇಟೆ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ೨೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡರು.
ಭಾರತ ದೇಶ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲು ವಿಷಯದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಡೆಯಿತು.
ಫಲಿತಾಂಶ : ಹಿರಿಯ ಪ್ರಾಥಮಿಕ ಇಂಗ್ಲೀಷ್ ಭಾಷಾ ವಿಭಾಗದಲ್ಲಿ ಕೂರ್ಗ್ ಸಿಗ್ನೇಚರ್ ಶಾಲೆಯ ಯಶಿಕ ಕಾವೇರಮ್ಮ, ಕಾಪ್ಸ್ ಶಾಲೆಯ ಉರ್ವಿ ಪೂವಣ್ಣ, ಕ್ಯಾಲ್ಸ್ ಶಾಲೆಯ ಮಯೂರ್ ಮಂದಣ್ಣ, ಕನ್ನಡ ವಿಭಾಗದಲ್ಲಿ ಸಂತ ಥೋಮಸ್ ಶಾಲೆಯ ಕೆ. ಎಂ. ನಿಧಿ, ಸಂತ ಆಂಥೋನಿ ಶಾಲೆಯ ಅಕ್ಷರ, ಲಯನ್ಸ್ ಶಾಲೆಯ ತನ್ವಿ ಕಾವೇರಮ್ಮ, ಪ್ರೌಡಶಾಲಾ ಇಂಗ್ಲೀಷ್ ವಿಭಾಗದಲ್ಲಿ ಲಯನ್ಸ್ ಶಾಲೆಯ ತಾನ್ಯ ದೇಚಮ್ಮ, ಕ್ಯಾಲ್ಸ್ ಶಾಲೆಯ ಆದಿತ್ ಜಾರ್ಜ್ ಪೊನ್ನಪ್ಪ, ಅಪ್ಪಚ್ಚಕವಿ ಶಾಲೆಯ ಸಿ. ಎಂ. ಸೌಜನ್ಯ, ಕನ್ನಡ ವಿಭಾಗದಲ್ಲಿ ಕ್ಯಾಲ್ಸ್ ಶಾಲೆಯ ಇಶಾನಿ ಬಿ. ರೈ, ಅಪ್ಪಚ್ಚಕವಿ ಶಾಲೆಯ ಟಿ. ಪಿ. ನಿಶಾ, ಲಯನ್ಸ್ ಶಾಲೆಯ ದೇಶ್ಣ ಉಪೇಂದ್ರ ಪ್ರಶಸ್ತಿ ಪಡೆದುಕೊಂಡರು.
ಸರ್ವದೈವತಾ, ರೂಟ್ಸ್, ಜೆ.ಸಿ, ಕೆಪಿಎಸ್, ಸಾಯಿ ಶಂಕರ್, ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಕಾವೇರಿ ಕಾಲೇಜು ಸಹ ಪ್ರಾಧ್ಯಾಪಕಿ ಎಸ್. ಎಂ. ರಜನಿ, ವಿದ್ಯಾನಿಕೇತನ ಕಾಲೇಜಿನ ಉಪನ್ಯಾಸಕ ಸಂತೋಷ್, ಕಾವೇರಿ ಕಾಲೇಜಿನ ರಿನಿ ಚಿಣ್ಣಪ್ಪ, ಕುಸುಮ್ ನೆಹರು ಕಾರ್ಯನಿರ್ವಹಿಸಿದರು.
ಅಪ್ಪಚ್ಚಕವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮಂಡಚAಡ ಎ. ದಿನೇಶ್ ಚಿಟ್ಟಿಯಪ್ಪ ಮಾತನಾಡಿ, ಚರ್ಚಾ ಸ್ಪರ್ಧೆಯಿಂದ ಮಕ್ಕಳು ವೈಯಕ್ತಿಕವಾಗಿ ಸ್ಪರ್ಧಿಸಲು ಹಾಗೂ ಮಕ್ಕಳು ವೇದಿಕೆಯಲ್ಲಿ ಭಯಪಡದೆ ಮಾತನಾಡಲು ಅವಕಾಶ ದೊರೆಯುತ್ತಿದೆ. ವಿಷಯದ ಕುರಿತು ಸವಿಸ್ತಾರವಾಗಿ ಚರ್ಚಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಉದಾರವಾದಿ ಮತ್ತು ಹೊಂದಿಕೊಳ್ಳುವ ನೀತಿಯನ್ನು ಹೊಂದಿದ ಭಾರತದ ಸಂವಿಧಾನದಲ್ಲಿ ಎಲ್ಲರಿಗೂ ಮಾತನಾಡುವ ಸ್ವಾತಂತ್ರ‍್ಯವಿದೆ. ಭಾರತ ಎದುರಿಸುತ್ತಿರುವ ಸವಾಲುಗಳಲ್ಲಿ ಭಯೋತ್ಪಾದನೆ ಕೂಡ ಒಂದಾಗಿದೆ ಭಾರತದಲ್ಲಿ ವಸುದೈವ ಕುಟುಂಬ ಎಂಬ ಪರಿಕಲ್ಪನೆ ಎಲ್ಲರ ಮನಸ್ಸಿನಲ್ಲಿ ಮೂಡಿದಾಗ ಮಾತ್ರ ಜಾತ್ಯತೀತ ರಾಷ್ಟ್ರದ ಪರಿಕಲ್ಪನೆ ನಿಜವಾಗಲು ಸಾಧ್ಯ ಎಂದರು. ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ, ಶಾಲೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಮಕ್ಕಳು ಪಾಠ ಕೇಳುವುದು ಅಥವಾ ಶಿಕ್ಷಕರು ಪಾಠ ಪ್ರವಚನಗಳಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಸಹಪಠ್ಯ ಚಟುವಟಿಕೆಗಳಲ್ಲೂ ಮಕ್ಕಳು ಮತ್ತು ಶಿಕ್ಷಕರು ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಉತ್ತಮ ನಾಗರಿಕರಾಗಲು ಸಾಧ್ಯ. ಮಕ್ಕಳಲ್ಲಿ ಜ್ಞಾನ ಬೆಳವಣಿಗೆಯಾಗುತ್ತದೆ ಎಂದರು. ಕಾರ್ಯದರ್ಶಿ ಮೂಕಳಮಾಡ ಅರಸು ನಂಜಪ್ಪ, ಮುಖ್ಯ ಶಿಕ್ಷಕಿ ಮಲಚಿರ ತನುಜಾ ಚಂಗಪ್ಪ, ಪೊನ್ನಂಪೇಟೆ ಮಹಿಳಾ ಸಮಾಜದ ಅಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ ಇದ್ದರು.