ಮಡಿಕೇರಿ, ಆ. ೨೭: ಜಿಲ್ಲೆಯಾದ್ಯಂತ ಮಳೆಯ ವಾತಾವರಣ ಮುಂದುವರಿದಿದೆ. ಕಳೆದ ಮೂರು ದಿನಗಳಿಂದ ವಾತಾವರಣದಲ್ಲಿ ಬದಲಾವಣೆಯಾಗಿದ್ದು ಮೋಡಕವಿದ ಸನ್ನಿವೇಶದೊಂದಿಗೆ ಆಗಾಗ್ಗೆ ಮಳೆ ಸುರಿಯುತ್ತಿದೆ. ಕೆಲವೆಡೆ ಮಳೆಯ ಪ್ರಮಾಣ ಹೆಚ್ಚಿದ್ದರೆ ಇತರೆಡೆಗಳಲ್ಲೂ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದು ನಿರಂತರವಾಗಿದೆ.

ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ೧.೦೬ ಇಂಚು ಸರಾಸರಿ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೧.೭೯, ವೀರಾಜಪೇಟೆ ೦.೭೬, ಪೊನ್ನಂಪೇಟೆ ೧.೪೯, ಸೋಮವಾರಪೇಟೆ ೧.೦೩ ಹಾಗೂ ಕುಶಾಲನಗರ ತಾಲೂಕಿನಲ್ಲಿ ೦.೨೪ ಇಂದು ಮಳೆಯಾಗಿದೆ.

ಹೋಬಳಿವಾರು ವಿವರ

ಕಳೆದ ೨೪ ಗಂಟೆಗಳಲ್ಲಿ ಮಡಿಕೇರಿ ಹೋಬಳಿಯಲ್ಲಿ ೧.೪೪, ನಾಪೋಕ್ಲು ೧.೫೩, ಸಂಪಾಜೆ ೦.೯೦, ಭಾಗಮಂಡಲದಲ್ಲಿ ೩.೩೧, ವೀರಾಜಪೇಟೆ ೦.೮೪, ಅಮ್ಮತ್ತಿ ೦.೬೮, ಹುದಿಕೇರಿ ೧.೯೩, ಶ್ರೀಮಂಗಲ ೧.೫೨, ಪೊನ್ನಂಪೇಟೆ ೧.೮೦, ಬಾಳೆಲೆ ೦.೭೨ ಇಂಚು ಮಳೆಯಾಗಿದೆ. ಸೋಮವಾರಪೇಟೆ ೦.೮೦, ಶಾಂತಳ್ಳಿ ೨.೪೪ ಇಂಚು ಮಳೆಯಾಗಿದೆ.