ಭಾಗಮಂಡಲ, ಆ. ೨೭: ಭಾಗಮಂಡಲದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೩-೨೪ರ ಸಾಲಿನಲ್ಲಿ ರೂ. ೫೪ ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಹೇಳಿದರು. ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘದಲ್ಲಿ ೩೮೬೬ ಮಂದಿ ಸದಸ್ಯರಿದ್ದು ೧೯೯೯.೩೯ ಲಕ್ಷ ಶೇರು ಹಣ ಇರುತ್ತದೆ. ಸಂಘದಲ್ಲಿ ೪,೨೭೫ ಉಳಿತಾಯ ಖಾತೆಗಳಿದ್ದು ಸಂಘದ ಎಲ್ಲಾ ಸದಸ್ಯರು ಉಳಿತಾಯ ಖಾತೆಯನ್ನು ಕಡ್ಡಾಯವಾಗಿ ಹೊಂದಬೇಕು. ಸಂಘದ ವ್ಯವಹಾರ ವನ್ನು ಉಳಿತಾಯ ಖಾತೆಯ ಮುಖಾಂತರ ನಡೆಸಿದರೆ ಸದಸ್ಯರ ಕನಿಷ್ಟ ವ್ಯವಹಾರವನ್ನು ಗುರುತಿಸಲು ಹಾಗೂ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಪಡೆಯಲು ಅನುಕೂಲವಾಗುತ್ತದೆ ಎಂದರು.

ಸಂಘದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರ ಅನುದಾನದಲ್ಲಿ ಒಂದು ಲಕ್ಷ ರೂ. ಅನುದಾನ ಬಂದಿದ್ದು ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಪುರಸ್ಕೃತ ಕೊಡ೦ದೆರ ಬಾಂಡ್ ಗಣಪತಿ ಅವರಿಗೆ ಸರ್ವ ಸದಸ್ಯರ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.

ಸಂಘವು ೨೦೧೯-೨೦ರ ಸಾಲಿನಲ್ಲಿ ೧೮ ಲಕ್ಷ, ೨೦೨೦- ೨೧ರ ಸಾಲಿನಲ್ಲಿ ೩೦ ಲಕ್ಷ, ೨೦೨೧- ೨೨ ರ ಸಾಲಿನಲ್ಲಿ ೩೮ ಲಕ್ಷ, ೨೦೨೦-೨೩ ಸಾಲಿನಲ್ಲಿ ೪೭ ಲಾಭ ಗಳಿಸಿದ್ದು ಈ ಸಾಲಿನಲ್ಲಿ ಅರ್ಧ ಕೋಟಿಗೂ ಹೆಚ್ಚು ಲಾಭಗಳಿಸಿರುವುದು ಹೆಮ್ಮೆಯ ವಿಷಯ ಎಂದರು.

೨೦೨೩ -೨೪ರ ಸಾಲಿನಲ್ಲಿ ೫೫೪ ಮಂದಿ ಸದಸ್ಯರಿಗೆ ೧೦೧೧.೩೩ ಲಕ್ಷ ರೂ. ಕೃಷಿ ಸಾಲ ವಿತರಿಸಲಾಗಿದೆ. ೫೪.೧೯ ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಘದ ನೂತನ ಸಭಾಭವನವನ್ನು ನಿರ್ಮಾಣ ಮಾಡಲಾಗಿದೆ ಎಂದರು. ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ೨೦೧೯-೨೦ರ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ಬಹುಮಾನ ೨೦,೦೦೦ ರೂ. ರಾಜ್ಯ ಅಪೆಕ್ಸ್ ಬ್ಯಾಂಕ್ ಬಹುಮಾನ ೧೦ ಸಾವಿರ ರೂ. ೨೦೨೦ -೨೧ರ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ಬಹುಮಾನ ೧೦ ಸಾವಿರ ರೂ. ೨೦೨೧ -೨೨ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ಬಹುಮಾನ ೨೫ ಸಾವಿರ ರೂ. ೨೦೨೨-೨೩ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ಬಹುಮಾನ ೨೫ ಸಾವಿರ ರೂ. ರಾಜ್ಯ ಅಪೆಕ್ಸ್ ಬ್ಯಾಂಕ್ ಬಹುಮಾನ ೧೦ ಸಾವಿರ ರೂ. ಹಾಗೂ ಪ್ರಸಕ್ತ ಸಾಲಿನಲ್ಲಿ ನ್ಯಾಷನಲ್ ಫೆಡರೇಶನ್ ಆಫ್ ಸ್ಟೇಟ್ ಕೋಆಪರೇಟಿವ್ ಬ್ಯಾಂಕ್‌ನಿAದ ರಾಷ್ಟಿçÃಯ ಪ್ರಶಸ್ತಿ ಲಭಿಸಿದೆ ಎಂದರು.

೧೧೯ ವರ್ಷ ಇತಿಹಾಸ ಇರುವ ಈ ಸಂಸ್ಥೆಯಲ್ಲಿ ಮೊದಲ ಬಾರಿಗೆ ಹೊಸ ಕಾರ್ಯಕ್ರಮ ಜಾರಿಗೆ ತಂದಿದ್ದು ಅತಿವೃಷ್ಟಿಯಲ್ಲಿ ವಾಸ ಮನೆ ಹಾನಿಗೊಳಗಾದ ಪ್ರತಿ ಕುಟುಂಬಕ್ಕೆ ರೂಪಾಯಿ ೫,೦೦೦ ಪರಿಹಾರ ಕೊಡಲು ತೀರ್ಮಾನಿಸಲಾಗಿದ್ದು ಒಟ್ಟು ೧೪ ಕುಟುಂಬಗಳಿಗೆ ಪರಿಹಾರ ಧನ ವಿತರಿಸಲಾಯಿತು. ಭಾಗಮಂಡಲ ಪಂಚಾಯಿತಿ ವ್ಯಾಪ್ತಿಯ ೧೦ ಕುಟುಂಬ ಅಯ್ಯಂಗೇರಿ ಪಂಚಾಯಿತಿ ವ್ಯಾಪ್ತಿಯ ಎರಡು ಕುಟುಂಬ ಹಾಗೂ ಕುಂದಾಚೇರಿ ಪಂಚಾಯಿತಿ ವ್ಯಾಪ್ತಿಯ ಎರಡು ಕುಟುಂಬ ಒಟ್ಟು ಪರಿಹಾರ ೭೦ ಸಾವಿರ ನೀಡಲು ತೀರ್ಮಾನಿಸಲಾಯಿತು.

ಮುಂದಿನ ವರ್ಷದಿಂದ ಸಂಘದ ಸದಸ್ಯರಿಗೆ ಮಾತ್ರ ಮನೆ ಕಳೆದುಕೊಂಡವರಿಗೆ ಭಾಗಶ ಹಾನಿ ಒಳಗಾದವರಿಗೆ ಪರಿಹಾರ ಒದಗಿಸಲು ನಿರ್ಧರಿಸಲಾಯಿತು. ಎಸ್‌ಎಸ್ ಎಲ್‌ಸಿ, ಪಿಯುಸಿ ಮತ್ತು ಪದವಿ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ನಂಜುAಡಪ್ಪ, ಕಾರ್ಯ ನಿರ್ವಹಣಾಧಿಕಾರಿ ಜಗನ್ನಾಥ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಾರಾಯಣ ಸೇರಿದಂತೆ ಎಲ್ಲ ನಿರ್ದೇಶಕರುಗಳು, ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.