ಮಡಿಕೇರಿ, ಆ. ೨೭: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಜಿಲ್ಲೆಯ ಪದವಿ ಮಕ್ಕಳಿಗೆ ಸ್ವಾತಂತ್ರೊö್ಯÃತ್ಸವ ಪ್ರಯುಕ್ತ ಭಾರತೀಯತೆಯ ಹಿರಿಮೆ-ಗರಿಮೆ ವಿಷಯದಲ್ಲಿ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ೨೫೦ ಪದಗಳ ಮಿತಿಯಲ್ಲಿ, ಬರಹಗಳನ್ನು ಕಳುಹಿಸಬಹುದು. ಒಮ್ಮೆ ಕಳುಹಿಸಿದ ಬಳಿಕ ತಿದ್ದುಪಡಿಗೆ ಅವಕಾಶವಿಲ್ಲ.
ಬರಹಗಾರರು ಅವರ ಹೆಸರು ಮತ್ತು ಕಾಲೇಜಿನ ಹೆಸರನ್ನು ಸ್ಪಷ್ಟವಾಗಿ ನಮೂದಿಸಿರಬೇಕು. ಲೇಖನವನ್ನು ವ್ಯಾಟ್ಸಾಪ್ ಸಂಖ್ಯೆ : ೮೭೬೨೬೩೨೩೧೪ ಗೆ ತಾ. ೨೯ ರೊಳಗೆ ಕಳುಹಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಹ ಕಾರ್ಯ ದರ್ಶಿ ಚಂದನ್ ನಂದರಬೆಟ್ಟು ೮೭೬೨೬೩೨೩೧೪ ಅವರನ್ನು ಸಂಪರ್ಕಿಸುವAತೆ ಕೋರಲಾಗಿದೆ.