ಚೆಯ್ಯಂಡಾಣೆ, ಆ. ೨೭: ಕೊಡಗಿನಲ್ಲಿ ಕೃಷಿ ಚಟುವಟಿಕೆಗಳು ಮರೆಯಾಗುತ್ತಿರುವ ಬೆನ್ನಲ್ಲೇ ಪುಟಾಣಿ ಮಕ್ಕಳಿಗೆ ತಳಮಟ್ಟ ದಿಂದಲೇ ಕೃಷಿ ಚಟುವಟಿಕೆಯ ಬಗ್ಗೆ ಆಸಕ್ತಿ ಮೂಡಿಸುವ ವಿನೂತನ ಪ್ರಯತ್ನವನ್ನು ಮಾಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಹಾಗೂ ಪೋಷಕರು ಪುಟಾಣಿ ಮಕ್ಕಳೊಂದಿಗೆ ಗದ್ದೆಗೆ ಇಳಿದು ನಾಟಿ ಕಾರ್ಯದಲ್ಲಿ ತೊಡಗಿ ಮಾದರಿ ಎನಿಸಿಕೊಂಡಿದ್ದಾರೆ.
ನಾಪೋಕ್ಲು ಬಳಿಯ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬಡಕ್ಕೇರಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿರುವ ಪುಟಾಣಿ ಮಕ್ಕಳಿಗೆ ಆಯೋಜಿಸಲಾದ ಹೊರಸಂಚಾರ ಕಾರ್ಯಕ್ರಮದಲ್ಲಿ ಕಬಡಕ್ಕೇರಿ ಗ್ರಾಮದ ನಿವಾಸಿ ಕೋರನ ದೇವಿಪ್ರಸಾದ್ ಅವರ ಗದ್ದೆಯಲ್ಲಿ ನಡೆದ ನಾಟಿ ಕಾರ್ಯವನ್ನು ವೀಕ್ಷಿಸಿದ ಪುಟಾಣಿಗಳು ಬಳಿಕ ರೈತರ ಉಡುಗೆಯೊಂದಿಗೆ ಗದ್ದೆಗೆ ಇಳಿದು ಅಂಗನವಾಡಿ ಕಾರ್ಯಕರ್ತೆ ಹಾಗೂ ಪೋಷಕರೊಂದಿಗೆ ನಾಟಿ ಕಾರ್ಯದಲ್ಲಿ ತೊಡಗಿ ಸಂಭ್ರಮಿಸಿದರು.
ಪ್ರತಿ ವರ್ಷ ಹಲವಾರು ವಿನೂತನ ಕಾರ್ಯಕ್ರಮವನ್ನು ಆಯೋಜಿಸಿ ಮಾದರಿಯೆನಿಸಿಕೊಂಡಿರುವ ಅಂಗನವಾಡಿ ಕೇಂದ್ರ ಇದಾಗಿದ್ದು, ಇಲ್ಲಿನ ಕಾರ್ಯಕರ್ತೆ ತಂಸೀನ ಬಾನು ಅವರು ಉತ್ತಮವಾಗಿ ಅಂಗನವಾಡಿ ಕೇಂದ್ರದ ನಿರ್ವಹಣೆಮಾಡುತ್ತಾ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಲಾಖೆಯಿಂದ ಸಿಗುವ ಸೌಲಭ್ಯ ಮತ್ತು ಶಿಕ್ಷಣ ಬೋಧನೆಯಲ್ಲಿ ಮುತುವರ್ಜಿ ವಹಿಸುತ್ತಿದ್ದಾರೆ. ಅಲ್ಲದೆ ಮಾತೃವಂದನಾ, ಭಾಗ್ಯಲಕ್ಷಿö್ಮ ಯೋಜನೆಯ ಸೌಲಭ್ಯ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸೌಲಭ್ಯಗಳನ್ನು ಫಲಾನುಭವಿಗಳಿಗೆ ದೊರಕಿಸಿ ಕೊಡುವ ನಿರಂತರ ಪ್ರಯತ್ನದ ಮೂಲಕ ನಿಸ್ವಾರ್ಥ ಸೇವೆಯನ್ನು ಮಾಡುತ್ತಿರುವ ಇವರನ್ನು ಗುರುತಿಸಿ ೨೦೨೩ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿಯನ್ನು ತಂಸೀನ ಬಾನು ಅವರಿಗೆ ನೀಡಿ ಗೌರವಿಸಿದ್ದರು.
ಮಕ್ಕಳ ಪೋಷಕರನ್ನು ಒಗ್ಗೂಡಿಸಿ ಬಾಲ ವಿಕಾಸ ಸಮಿತಿ ರಚನೆ ಮಾಡಿ ಹೊರಸಂಚಾರ ಕಾರ್ಯಕ್ರಮದ ಮೂಲಕ ಅಂಚೆ ಕಛೇರಿ, ಗ್ರಾಮ ಪಂಚಾಯಿತಿ, ಆಸ್ಪತ್ರೆ, ಮಸೀದಿ, ದೇವಾಲಯಕ್ಕೆ ಮಕ್ಕಳನ್ನು ಕರೆದೊಯ್ದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾದರಿ ಅಂಗನವಾಡಿ ಕೇಂದ್ರ ಎಂಬ ಹೆಗ್ಗಳಿಕೆಗೆ ಈ ಅಂಗನವಾಡಿ ಕೇಂದ್ರ ಪಾತ್ರವಾಗಿದೆ.
ತಂಸೀನ ಬಾನು ಶಕ್ತಿಯೊಂದಿಗೆ ಮಾತನಾಡಿ, ಈಗ ಎಲ್ಲೆಡೆ ಬತ್ತದ ನಾಟಿ ಕೃಷಿ ನಡೆಯುವ ಸಮಯವಾದ್ದರಿಂದ ನಾವು ಮಕ್ಕಳಿಗೆ ತರಗತಿಗಳಲ್ಲಿ ಪುಸ್ತಕದಲ್ಲಿರುವ ನಾಟಿ ಕೃಷಿ ವಿಧಾನದ ಬಗ್ಗೆ ಹೇಳುವ ಬದಲು ಅವರನ್ನು ನಾಟಿ ಕೆಲಸ ಮಾಡುವ ಸ್ಥಳಕ್ಕೆ ಕರೆತಂದು ಪ್ರತ್ಯಕ್ಷವಾಗಿ ವಿವರಿಸಿ ನಾಟಿ ಕೃಷಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಹೊರ ಸಂಚಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಇದೇ ರೀತಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಇದಕ್ಕೆ ಮಕ್ಕಳ ಪೋಷಕರು ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಪೋಷಕರು ಕೂಡ ಭಾಗಿಯಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊAಡರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಮಧ್ಯಾಹ್ನದ ಉಪಹಾರವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭ ಬಾಲವಿಕಾಸ ಸಮಿತಿ ಅಧ್ಯಕ್ಷೆ ಅನ್ನತ್ ಬೀಬಿ, ಸದಸ್ಯರಾದ ಶ್ವೇತಕಲಾ, ತಸ್ಫಿಯಾ, ಫಾತಿಮಾ, ಸಂದ್ಯಾ, ಸ್ತಿçÃಶಕ್ತಿ ಸಂಘದ ಅಧ್ಯಕ್ಷೆ ಜಲಜಾಕ್ಷಿ ಆಶಾ ಕಾರ್ಯಕರ್ತೆ ಮುಮ್ತಾಜ್, ಸಹಾಯಕಿ ಪ್ರೇಮ ಮತ್ತಿತರರು ಹಾಜರಿದ್ದರು.
- ಅಶ್ರಫ್