ಚೆಯ್ಯಂಡಾಣೆ, ಆ. ೨೫: ಸ್ಥಳೀಯ ನರಿಯಂದಡ ಕೇಂದ್ರ ಪ್ರೌಢ ಶಾಲೆಯಲ್ಲಿ ನಾಪೋಕ್ಲು ವಲಯಮಟ್ಟದ ಪ್ರೌಢ ಶಾಲಾ ವಿಭಾಗದ ಕ್ರೀಡಾಕೂಟ ನಡೆಯುತ್ತಿದ್ದು, ಒಟ್ಟು ನಾಪೋಕ್ಲು ವಲಯದ ೧೩ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು ಇದರಲ್ಲಿ ತಾಲೂಕುಮಟ್ಟಕ್ಕೆ ಆಯ್ಕೆಯಾದ ಶಾಲೆಗಳ ವಿವರ ಈ ಕೆಳಗಿನಂತಿವೆ.
ಬಾಲಕರ ಥ್ರೋಬಾಲ್ ಪಂದ್ಯಾಟದಲ್ಲಿ ಎಮ್ಮೆಮಾಡು ಪ್ರೌಢಶಾಲೆ, ಬಾಲಕಿಯರ ಥ್ರೋಬಾಲ್ ಪಂದ್ಯಾಟದಲ್ಲಿ ಹೊದವಾಡ ಪ್ರೌಢಶಾಲೆ, ಬಾಲಕರ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ನರಿಯಂದಡ ಕೇಂದ್ರ ಪ್ರೌಢಶಾಲೆ, ಬಾಲಕರ ಹಾಗೂ ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ಅಂಬೇಡ್ಕರ್ ಪ್ರೌಢಶಾಲೆ ನಾಪೋಕ್ಲು, ಬಾಲಕರ ಹಾಕಿ ಪಂದ್ಯಾಟದಲ್ಲಿ ಶ್ರೀ ರಾಮ ಟ್ರಸ್ಟ್ ನಾಪೋಕ್ಲು, ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಅಂಬೇಡ್ಕರ್ ಪ್ರೌಢಶಾಲೆ ನಾಪೊಕ್ಲು, ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ನರಿಯಂದಡ ಕೇಂದ್ರ ಪ್ರೌಢಶಾಲೆ, ಬಾಲಕರ ಫುಟ್ಬಾಲ್ ಪಂದ್ಯಾಟದಲ್ಲಿ ಹೊದವಾಡ ಪ್ರೌಢಶಾಲೆ, ಬಾಲಕರ ಹಾಗೂ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಶ್ರೀರಾಮ ಟ್ರಸ್ಟ್ ನಾಪೋಕ್ಲು, ಬಾಲಕರ ಹಾಗೂ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಹೊದವಾಡ ಪ್ರೌಢಶಾಲೆ, ಬಾಲಕರ ಚೆಸ್ ಪಂದ್ಯಾಟದಲ್ಲಿ ಸೇಕ್ರೆಟ್ ಹಾರ್ಟ್ ನಾಪೋಕ್ಲು, ಬಾಲಕಿಯರ ಚೆಸ್ ಪಂದ್ಯಾಟದಲ್ಲಿ ಆಕ್ಸ÷್ಫರ್ಡ್ ಶಾಲೆ ಜಯಗಳಿಸಿ ತಾಲೂಕುಮಟ್ಟಕ್ಕೆ ಆಯ್ಕೆಯಾಗಿದ್ದಾರೆ.