ಪಾಲಿಬೆಟ್ಟ, ಆ. ೨೫: ಸರ್ವಧರ್ಮ ಸಂಕೇತದ ಇತಿಹಾಸ ಪ್ರಸಿದ್ಧ ಪಾಲಿಬೆಟ್ಟದ ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಉರೂಸ್ ನೇರ್ಚೆ ಮುಂದಿನ ವರ್ಷ ಜನವರಿ ೩೧, ಫೆಬ್ರವರಿ ೧, ೨, ೩ ರವರೆಗೆ ಸರ್ವಧರ್ಮ ಸಮ್ಮೇಳನ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಪಾಲಿಬೆಟ್ಟ ಮುಸ್ಲಿಂ ಜಮಾಅತ್ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ತಿಳಿಸಿದ್ದಾರೆ.
ಜ. ೩೧ ರಂದು ಶುಕ್ರವಾರ ಜುಮಾ ನಮಾಜ್ ಬಳಿಕ ಆರ್ಕಾಡ್ ಪಟ್ಟಾಣ್ ಬಾಬಾ ದರ್ಗಾಗೆ ತೆರಳಿ ವಿಶೇಷ ಪ್ರಾರ್ಥನೆಯೊಂದಿಗೆ ಮುಖಾಂ ಝಿಯಾರತ್ ಬಳಿಕ ಜುಮಾ ಮಸೀದಿ ಕಮಿಟಿ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಸೀದಿಯ ಖತಿಬ್ ಜುಬೇರ್ ಸಖಾಫಿ ಉದ್ಘಾಟನೆ ಮಾಡಲಿದ್ದಾರೆ.
ಧಾರ್ಮಿಕ ಪಂಡಿತರುಗಳಿAದ ಮತ ಪ್ರಭಾಷಣ ನಡೆಯಲಿದೆ. ಕೊನೆಯ ದಿನ ಸರ್ವಧರ್ಮ ಸಮ್ಮೇಳನ ಹಾಗೂ ಧಾರ್ಮಿಕ ಪಂಡಿತರುಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಫೆ. ೩ರಂದು ಸಂಜೆ ೬.೩೦ ಗಂಟೆಯಿAದ ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯ ನಡೆಯಲಿದೆ ಎಂದು ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ತಿಳಿಸಿದ್ದಾರೆ. ಈ ಸಂದರ್ಭ ಮಸೀದಿಯ ಖತೀಬ್ ಜುಬೇರ್ ಸಖಾಫಿ, ಜುಮಾ ಮಸೀದಿಯ ಉಪಾಧ್ಯಕ್ಷ ಎಂ ಸೈನುದ್ದೀನ್, ಪ್ರಧಾನ ಕಾರ್ಯದರ್ಶಿ ಶಮೀರ್ ಮುನ್ನ, ಖಜಾಂಚಿ ಟಿ.ಕೆ ಮುಸ್ತಫ, ಆಡಳಿತ ಮಂಡಳಿಯ ಶಮೀರ್, ಫಜಲ್ ರೆಹಮಾನ್, ಬಷೀರ್, ಫೈಜಲ್, ಮಾಜಿ ಅಧ್ಯಕ್ಷ ಅಬೂಬಕರ್, ಮಾಜಿ ಕಾರ್ಯದರ್ಶಿ ಖಾಲಿದ್, ಹಿರಿಯರಾದ ಕುಂಞÂ ಮೊಹಮ್ಮದ್ ಇದ್ದರು.